•  
  •  
  •  
  •  
Index   ವಚನ - 950    Search  
 
ಐಕ್ಯನ ಶರಣಸ್ಥಲ - ಸರ್ವವ್ಯಾಪಿ
ಭೂ ತೋಯ ಪಾವಕ ಸಮೀರಣ ಅಂಬರಾದಿಗಳೆಲ್ಲ ಆದಿಯಾಧಾರದ ಪರಮಾತ್ಮಲಿಂಗದಲ್ಲಿ! ಆದಿ ಮಧ್ಯಾವಸಾನವನರಿಯದ ಅಗಮ್ಯ! ವೇದಾದಿ ಸಕಲಶಾಸ್ತ್ರಪ್ರಮಾಣರು ಅದನಂತಿಂತೆಂದುಪಮಿಸಲಿಲ್ಲಾ, ಮಹಂತ ಕೂಡಲಸಂಗಮದೇವಾ.
Transliteration Bhū tōya pāvaka samīraṇa ambarādigaḷella ādiyādhārada paramātmaliṅgadalli! Ādi madhya avasānavanariyada agamya! Vēdādisakalaśāstrapramāṇaru adanantintendupamisalilla, mahanta kūḍalasaṅgamadēvā.
Manuscript
English Translation 2 Earth, water, fire, ether- all Are in the supreme Liṅga , he who is The ground and origin! He is the incomprehensible who has Neither beginning, middle nor an end: Authorities on Vedas and the like, And all the Śāstras fail to tell of Him This way or that- the glorious one, Lord Kūḍala Saṅgama Translated by: L M A Menezes, S M Angadi
Hindi Translation भू, तोय, पावक, समीरण, अंबर आदि आदियाधार परमात्म-लिंग के भीतर हैं । वेदादि सकल शास्त्रों के प्रवीण, आदिमध्यांत रहित उस अगम्य का, वास्तविक वर्णन नहीं कर सके, कूडलसंगमदेव महान् हैं॥ Translated by: Banakara K Gowdappa
Telugu Translation భూమి; నీరు; నిప్పు; గాలి; బయలివి యెల్లా; ఆ యాది ఆధారుని పరమాత్మయందుండె; ఆది మధ్యాంతములు లేని అగమ్యుడు; వేదాది శాస్త్ర ప్రామాణికులిటౌట్లని నిన్ను ఉపమింపలేరు దేవా! Translated by: Dr. Badala Ramaiah
Marathi Translation पृथ्वी, जल, अग्नी, वायू, आकाश हे सर्व आदि आधारमूळ परमात्मा लिंगामध्ये आदि-मध्य-अवसानाला न जाणणाऱ्यांना आगम्य सकल वेद शास्त्र प्रमाण त्याचे वर्णन करू शकत नाही महांत कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಆದಿಯೆಂಬುದುದೇನುಂಟೋ –ಅದಕ್ಕೂ ಆಧಾರಪ್ರಾಯವಾದ ಅನಾದಿಪರಶಿವಬ್ರಹ್ಮದ ಬುಡ ನಡು ಕಡೆ ಏನೊಂದನ್ನೂ ವಿದ್ವಾಂಸರು ತಿಳಿಯರು. ಸ್ವಾನುಭೂತಿಯಿಲ್ಲದೆ ಕೇವಲ ವೇದಶಾಸ್ತ್ರಾದಿ ಶಬ್ದಪ್ರಮಾಣವೊಂದರಿಂದಲೇ ಯಾರು ಆ ಶಿವನ ಸ್ವರೂಪವನ್ನು ತಿಳಿಯಲಾಗದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು