ಮಹಾಲಿಂಗಸ್ಥಾನಂಗಳು ಮಹಾಲಿಂಗದ ಹೆಸರಲ್ಲದೆ,
ಲಿಂಗ ಬೇರೆ ರೂಪ ನಿರೂಪನಲ್ಲ.
ಲಿಂಗ ಬೇರೆ ಕಾಯಸಂಬಂಧಿಯಲ್ಲ.
ಲಿಂಗ ಬೇರೆ ಮಹಾಘನದಿಂದತ್ತತ್ತಲೆ!
ಕೂಡಲಸಂಗಮದೇವರ ನಿಲವು ಆರಿಗೂ ಅಳವಡದು!
Transliteration Mahāliṅgasthānagaḷu mahāliṅgada hesarallade,
liṅga bēre rūpa nirūpanalla.
Liṅga bēre kāyasambandhiyalla.
Liṅga bēre mahāghanadindattattale!
Kūḍalasaṅgamadēvara nilavu ārigū aḷavaḍadu!
Manuscript
English Translation 2 The several seats of the Great Liṅga are
Only His names; but Liṅga Himself
Is neither form nor formlessness.
Liṅga admits no contact with the flesh;
Liṅga is far apart, beyond
The ultimate Absolute!
No one can grasp the worth
Of Lord Kūḍala Saṅgama!
Translated by: L M A Menezes, S M Angadi
Hindi Translation महालिंग के स्थान महालिंग के ही नाम हैं,
लिंग न तो साकार है न निराकार;
लिंग काय-संबंधी नहीं है;
लिंग उस अंतिम परिपूर्णता के परे है ।
कूडलसंगमदेव की स्थिति किसी को ज्ञात नहीं हो सकती ॥
Translated by: Banakara K Gowdappa
Telugu Translation మహాలింగస్థానములు మహాలింగుని పేరు గాక;
లింగము వేఱే రూపున నిరూపి కాడు;
లింగము వేఱె కాయ సంబంధి కాడు! మహాఘనతకు పై పైననే
మహాదేవుని నిలువయే లింగము, ఎవ్వరికీ అలవడదయ్యాసంగయ్యా:
Translated by: Dr. Badala Ramaiah
Marathi Translation
महालिंगाची क्षेत्रस्थळे महालिंगाची नावे आहेत.
लिंग साकार नाही, निराकार नाही,
लिंग देहसंबंधी नाही, जीवसंबंधी नाही.
लिंग महाघनातीत आहे.
कूडलसंमदेवाचे स्वरुप कोणीही जाणत नाही.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ವಿರೂಪಾಕ್ಷ, ವಿಶ್ವೇಶ್ವರ ಎಂದು ಮುಂತಾದ ದೇವರ ಹೆಸರುಗಳು ತಮ್ಮ ಮಹಿಮಾವಿಸ್ತಾರದಿಂದ ಹಂಪೆ, ಕಾಶಿ ಎಂಬಂಥ ಲಿಂಗಸ್ಥಾನಗಳಿಗೂ ಹೆಸರಾಗಬಹುದು –ಆದರೆ ಆ ಲಿಂಗವು ಈ ಯಾವೊಂದು ದೇಶ ಪರಿಮಿತಿಗೂ ಒಳಗಾಗದು.
ಲಿಂಗವು ಪ್ರತ್ಯೇಕವಾದೊಂದು ರೂಪದಿಂದ ನಿರೂಪಿತವಾಗುವಂಥದಲ್ಲ –ಏಕೆಂದರೆ ಆ ಲಿಂಗಕ್ಕೆ ಯಾವ ಕಾಯಬಂಧವೂ ಇಲ್ಲ.
ಲಿಂಗವು ಮಹಾಘನ(ಪರತತ್ತ್ವ)ಕ್ಕೂ ಘನತರವಾದುದು. ಎಲ್ಲ ನಾಮರೂಪ ದೇಶಸೀಮೆಗೂ ಹೊರಗಾದುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು