•  
  •  
  •  
  •  
Index   ವಚನ - 952    Search  
 
ಐಕ್ಯನ ಶರಣಸ್ಥಲ - ಭಕ್ತ
ಹುತ್ತಕ್ಕೆ ಏಸು ಬಾಯಾದರೇನು? ಸರ್ಪನಿರ್ಪುದು ಒಂದೇ ಸ್ಥಾನ ! ಭಾವ ಭಾವಿಸಿ ಭ್ರಮೆಯಳಿದು ನೋಡಾ: ಆ ಭಾವ ಭಾವಿಸಲು ನಿರ್ಭಾವ, ಕೂಡಲಸಂಗಮದೇವಾ.
Transliteration Huttakke ēsu bāyādarēnu? Sarpanippudu ondē sthāna! Bhāva bhāvisi bhrameyaḷidu nōḍā: Ā bhāva bhāvisalu nirbhāva, kūḍalasaṅgamadēvā.
Manuscript
Music Courtesy:
English Translation 2 What signifies how many mouths An anthill has? Where the snake is That is the only place!Do look at it Shedding the error of thinking in terms of thought: When you think of this thought, it is Beyond all thought, O Kūḍala saṅgama Lord? Translated by: L M A Menezes, S M Angadi
Hindi Translation वल्मीक के चाहे कितने भी मुख हो, सर्प के रहने का स्थान एक ही है। भ्रम दूर कर मन में विचार कर देखो, तो वह भावों के परे हैं, कूडलसंगमदेव। Translated by: Banakara K Gowdappa
Telugu Translation వేదాతీతుడు, షడ్వర్గరహితుడు; అష్ట త్రింశత్కళాతీతుడు, వ్యోమాతీతుడు మా కూడల సంగమదేవుడు. Translated by: Dr. Badala Ramaiah
Marathi Translation वारुळात कितीही बिळे असली तरी काय? सर्प राहतो एकाच बिळात भावाला सत्य मानतात त्यात भ्रम नसावा. सत्यभाव चिंतनाला निर्भाव आहे कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಹುತ್ತ ಮತ್ತು ಹಾವು : ಹುತ್ತಕ್ಕೆ ಬಾಯಿ ಹಲವು. ಆ ಯಾವ ಬಾಯಿಂದ ಸರ್ಪನು ಒಳನುಸುಳಿದರೂ -ಸರ್ಪನು ತನ್ನಲ್ಲಿ ತಾನಾಗಿರುವುದು ಆ ಹುತ್ತದ ಒಂದೇ ಒಳಸ್ಥಾನದಲ್ಲಿ ! ಹಾಗೆಯೇ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳಲು ಸತಿಪತಿಭಾವ ಸ್ವಾಮಿಭೃತ್ಯಭಾವ ಮುಂತಾದ ಹಲವು ಮಾರ್ಗಗಳಿದ್ದರೂ -ಭ್ರಾಂತಿ ಬಿಟ್ಟು ಏಕೋಭಾವದಿಂದ ಭಾವಿಸಿದ್ದೇ ಆದರೆ-ಸಾಕ್ಷಾತ್ಕಾರವಾಗುವುದು ಶಿವಭಾವವೊಂದೇ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು