ವೇದಾತೀತ, ಷಡುವರ್ಣರಹಿತ, ಅಷ್ಟ ತ್ರಿಂಶತ್ ಕಳಾತೀತ,
ವ್ಯೋಮಾತೀತ, ಕೂಡಲಸಂಗಮದೇವ.
Transliteration Vēdātīta, ṣaḍuvarṇarahita, aṣṭa trinśat kaḷātīta,
vyōmātīta, kūḍalasaṅgamadēva
Manuscript
English Translation 2 Beyond the Vedas, above the six colours,
Beyond the eight-and-thirty characters,
Beyond the heavens
Is Lord Kūḍala saṅgama!
Translated by: L M A Menezes, S M Angadi
Hindi Translation वेदातीत, षड्वर्ण रहित, अष्टत्रिंशत्कळातीत,
व्योमातीत हैं, कूडलसंगमदेव ॥
Translated by: Banakara K Gowdappa
Telugu Translation వేదాతీతుడు, షడ్వర్గరహితుడు; అష్ట త్రింశత్కళాతీతుడు,
వ్యోమాతీతుడు మా కూడల సంగమదేవుడు.
Translated by: Dr. Badala Ramaiah
Marathi Translation
वेदातीत, षडुवर्णरहित,अष्टत्रिंशत्कलातीत,
व्योमातीत अगम्य अगोचर कूडलसंगमदेव आहे.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ವೇದಗಳನ್ನು ಓದಿದರೆ ತಿಳಿಯದು, ಮಂತ್ರಗಳನ್ನು ಉಚ್ಚರಿಸಿದರೆ ತಿಳಿಯದು, ಮೂವತ್ತೆಂಟು ಕಲಾಸ್ವರೂಪಿಯಾದ ಪಂಚಸಾದಾಖ್ಯಮೂರ್ತಿಯಿಂದಲೂ ಅತ್ತತ್ತಲಾಗಿರುವ ಪರಶಿವನ ಇರುವು. ಅವನು(ಚಿದ್) ಆಕಾಶಕ್ಕಿಂತಲೂ ಅತ್ತಣವನು.
ಅಥವಾ
ಪರಶಿವನು ಭೂಭುವನಾದಿ ಎಲ್ಲ ಅಧೋಪ್ರಕೃತಿಯಿಂದಲೂ, ಮಹೇಶ್ವರ ಸದಾಶಿವ ಶಿವಾದಿ ಊರ್ಧ್ವ ಪ್ರಕೃತಿಯಿಂದಲೂ ಆಚೆಗಿರುವನು. ಅವನು ವರ್ಣನೆಗೂ ಸ್ತುತಿಪಾಠಕ್ಕೂ ಮೀರಿದವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು