•  
  •  
  •  
  •  
Index   ವಚನ - 955    Search  
 
ಐಕ್ಯನ ಶರಣಸ್ಥಲ - ಸರ್ವವ್ಯಾಪಿ
ವಿಶ್ವಜಿತನು, ಧನುಜಿತನು, ಸರ್ವಜಿತನು; ಸುತ್ರಾಮಜಿತನು, ನೃಜಿತನು, ಉರ್ವರಾಜಿತನು; ಅಶ್ವಜಿತನು, ಗೋಜಿತನು, ಸ್ವರ್ಜಿತನು, ಸುಸಂವೇದ್ಯನು, ವೇದನಾದಾತೀತನು; ತುರಿಯಪರಮಾನಂದನು, ನಿರವಯ ಸೂರ್ಯಕೋಟಿಪ್ರಭೆಯ ಬೆಳಗಿನ ಸಹಸ್ರಕಿರಣದ ಅಗ್ರಪಟಲದ ಬೆಳಗು ಕೂಡಲಸಂಗಯ್ಯನು.
Transliteration Viśvajitanu, dhanujitanu, sarvajitanu; sutrāmajitanu, nr̥jitanu, urvarājitanu; aśvajitanu, gōjitanu, svarjitanu, susanvēdyanu, vēdanādātītanu; turiyaparamānandanu, niravaya sūryakōṭiprabheya beḷagina sahasrakiraṇada agrapaṭalada beḷagu kūḍalasaṅgayyanu.
Manuscript
English Translation 2 He is the conqueror of the world; He broke the bow; He vanquishes all things; he wins In all ways - men and earth; He tames the horse, the cow, the self; He's one who knows well; he's beyond Knowledge as well as Sound; He's the transcendent bliss of ectasy; He is without parts: Lord Kūḍala saṅgama Is splendour glowing from the summit mass of light Massive, and thousand-rayed, Irradiated by a billion suns, Translated by: L M A Menezes, S M Angadi
Hindi Translation विश्वजित, दनुर्जित, स्वर्जित, सुत्रामजित, नृजित, उर्वजित, अश्वजित, गोजित, अरिजित, स्वसंवेद्य, वेदनादातीत हैं । तुरीय परमानंद निरवय सूर्यकोटिप्रभा के प्रभात की सहस्र किरणों के अग्रपटल-प्रकाश हैं कूडलसंगमदेव ॥ Translated by: Banakara K Gowdappa
Telugu Translation విశ్వజితుడు, ధనుజితుడు, సర్వజితుడు, సుత్రామజితుడు, నృజితు, డుర్వరాజితు, డశ్వజితుడు, స్వర్జితుడు, సుసం వేద్యుడు, వేదనాదాతీతుడు, తురీయ పరమానందుడు మా సంగయ్య వెల్గె, కోటిసూర్య సహస్రకిరణాగ్రపటల ప్రభలపై Translated by: Dr. Badala Ramaiah
Marathi Translation विश्वजीत्, दनुजीत्, सर्वजीत्, सुत्रामजीत्, नृजीत्, उर्वराजित्, अश्वजीत्, गोजीत्, अजिरत्, स्वसंवेद्य, वेदनादातीत् तुर्यपरमानंद, निरवय, कोटी सूर्यप्रभेच्या प्रकाशात सहस्त्र किरणांच्या अग्रपटलावरील प्रकाश कूडलसंगमदेव. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವನು (ವಿಶ್ವಜಿತನು) ಎಲ್ಲವನ್ನೂ ಗೆದ್ದವನು, (ಧನುರ್ಜಿತನು) ಮನ್ಮಥ ಬಾಣವನ್ನು ಗೆದ್ದವನು, (ಸ್ವರ್ಜಿತನು) ಸ್ವರ್ಗವನ್ನು ಗೆದ್ದವನು, (ಸುತ್ರಾಮಜಿತನು) ಇಂದ್ರನನ್ನು ಗೆದ್ದವನು, (ನೃಜಿತನು) ಮನುಷ್ಯರನ್ನು ಗೆದ್ದವನು, (ಉರ್ವರಾಜಿತನು) ಭೂಮಿಯನ್ನು ಗೆದ್ದವನು; (ಅಶ್ವಜಿತನು) ಕುದುರೆಗಳನ್ನು ಗೆದ್ದವನು, (ಗೋಜಿತನು) ಗೋವುಗಳನ್ನು ಗೆದ್ದವನು, (ಅರಿಜಿತನು) ಶತ್ರುಗಳನ್ನು ಗೆದ್ದವನು, ಶಿವನು ಎಲ್ಲವನ್ನು ಗೆದ್ದು “ಸೂರ್ಯಕೋಟಿ ಪ್ರಭೆಯ ಬೆಳಗಿನ ಸಹಸ್ರಕಿರಣದಗ್ರಪಟಲದ ಬೆಳಗಾಗಿ” ಶಿವಯೋಗಿಗಳಿಗೆ ಸುಸಂವೇದ್ಯನಾಗಿರುವನು. ಜಾಗ್ರತ್ ಸ್ವಪ್ನ ಸುಷುಪ್ತಿಗಳಿಂದಾಚೆಗೆ ಪ್ರತೀಯಮಾನವಾಗುವ ತುರೀಯಾನಂದ ನಿರವಯನು, ವೇದನಾದಾತೀತನು, ಸ್ವಾನುಭಾವೈಕವೇದ್ಯನು ಶಿವನು. ವಿ : ಅಶ್ವ ಗೋ ಮುಂತಾದ ಪದಗಳಿಗೆ ಬಸವಣ್ಣನವರ ಪ್ರಕಾರ ಏನು ಅರ್ಥವೋ ತಿಳಿಯದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು