ಸಹಸ್ರಶೀರ್ಷನಾದಿಪುರುಷನು ವೇದಪುರುಷನೊಬ್ಬ ಪುರುಷನು;
ಜ್ಯೋತಿಪುರುಷನೊಬ್ಬ ಪುರುಷನು; ತ್ರಿಪಾದದೂರ್ಧ್ವ ಪುರುಷನೊಬ್ಬ
ಪುರಷನು; ಉದನ್ಮುಖನೊಬ್ಬ ಪುರುಷನು, ಉದಯ ಮುಖನೊಬ್ಬ
ಪುರುಷನು; ವಿರಾಟಜನನನೊಬ್ಬ ಪುರುಷನು, ವಿರಾಜ ಪುರುಷನೊಬ್ಬ
ಪುರುಷನು; ಆದಿಪುರುಷನೊಬ್ಬ ಪುರುಷನು, ವಿಯತ್ ಪುರುಷನೊಬ್ಬ
ಪುರುಷನು; ತದ್ವಿಯತ್ಪುರುಷಾಪುರುಷ ಪುರುಷರಿಲ್ಲದ ಪ್ರಭೆಯ ನೋಡಿರೆ:
ವೇದನಾದಾತೀತ ತುರ್ಯಪರಮಾನಂದ ನಿರವಯಂ
ಷಡುತ್ರಿಂಶತ್ ಪ್ರಭಾಪಟಲದ ಪ್ರಭೆಯ ಬೆಳಗಿದೆ ನೋಡಿರೆ:
ಬೆಳಗಿನೊಳಗಣ ಮಹಾಬೆಳಗಿನ ಬೆಳಗು, ನಮ್ಮ ಕೂಡಲಸಂಗಯ್ಯ!
Transliteration Sahasraśīrṣanādipuruṣanu vēdapuruṣanobba puruṣanu;
jyōtipuruṣanobba puruṣanu; tripādadūrdhva puruṣanobba
puruṣanu; udanmukhanobba puruṣanu, udaya mukhanobba
puruṣanu; virāṭajanananobba puruṣanu, virājapuruṣanobba
puruṣanu; ādipuruṣanobba puruṣanu, viyatpuruṣanobba
puruṣanu; tadviyatpuruṣapuruṣa puruṣarillada prabheya nōḍire:
Vēdanādātīta turyaparamānanda niravayam
ṣaḍutrinśat prabhāpaṭalada prabheya beḷagide nōḍire:
Beḷaginoḷagaṇa mahābeḷagina beḷagu, nam'ma kūḍalasaṅgayya!
Manuscript
English Translation 2 He is the only Puruṣa who was
In the beginning, he of thousand heads
In Knowledge and the light the only one;
He who's three-fourths above,
Whose face is upward turned-a dawn;
He who creates this manifold,
Who shines above,Puruṣa the first:
He who is lightning, in whose blaze
There's neither Puruṣa nor no Puruṣa : Lo!
Here's the blaze
Of six-and-thirty halos, past
All understanding, bliss supreme, and whole:
Our Lord Kudala Sanga is the light
Of the supernal light is
Within the light.
Translated by: L M A Menezes, S M Angadi
Hindi Translation सहस्र शीर्षोंवाला अनादि पुरुष एक है,
वेद पुरुष एक है, त्रिपादूर्घ्व पुरुष एक है,
उदङ्मुख पुरुष एक है, उदयमुख-पुरुष एक है,
विराट पुरुष एक है, आदि पुरुष एक है,
वियत्पुरुष एक है, तद्वियत्पुरूष
वेदनादातीत, तुरीय परमानंद निरवय
देखों षट्त्रिंशत-प्रभा पटल की प्रभा प्रज्वलित है
प्रकाशांतर्गत महाप्रकाश का प्रकाश है, कूडलसंगमदेव ॥
Translated by: Banakara K Gowdappa
Marathi Translation
सहस्त्रशीर्ष आदि पुरुष आहे. वेद पुरुष हा एक पुरुष आहे.
ज्योतिपुरुष हा एक पुरुष. त्रिपादउर्ध्य हा एक पुरुष आहे.
उदन्मुख हा एक पुरुष आहे. उदय पुरुष हा एक पुरुष आहे.
विराट पुरुष यह एक पुरुष आहे. विराजपुरुष हा एक पुरुष आहे
आदि पुरुष हा एक पुरुष आहे.वियत्पुरुष हा एक पुरष आहे.
तद्वियत्पुरुष पुरुष नसून ही त्याची प्रभा पहा.
वेदनादातीत तुर्य परमानंद निरवय
षट्त्रिंशत् पटल प्रकाश उजळला पहा.
प्रकाशातील महाप्रकाश झळकला माझे कूडलसंगय्या.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಸಹಸ್ರಶೀರ್ಷನಾದಿ ಪುರುಷ-ವೇದಪುರುಷ-ಜೋತಿಪುರುಷ ಮುಂತಾದ ಎಲ್ಲ ಪುರುಷರಿಗೂ ತನ್ನ ಪ್ರಭೆಯನ್ನು ಹಂಚಿ ಮತ್ತೆಯೂ ಅಧಿಕೋಜ್ವಲವಾಗಿರುವ ಶಿವನ ಪ್ರಭೆ ದರ್ಶನೀಯವಾದ್ದು, ವೇದನಾದಾತೀತತುರ್ಯ ಪರಮಾನಂದ ನಿರವಯನು ಶಿವನು, ಷಟ್ತ್ರಿಂಶತ್ಪ್ರಭಾಪಟಲದ ಪ್ರಭೆಗೆ ಪ್ರಭೆ ಆದಾತನವನು -ಬೆಳಗಿನೊಳಗಣ ಮಹಾಬೆಳಗು ಆ ಶಿವನು.
ವಿ : ಈ ವಚನನಾದದಿಂದ ಹೊಳೆಯುವ ಸತ್ಯಪ್ರಕಾಶಕ್ಕೂ ಮೀರಿದ ಆನಂದರೂಪಿ ಆ ಶಿವನು ಅವನನ್ನು ಕುರಿತಂತೆ ಬಸವಣ್ಣನವರ ಅತೀಂದ್ರಿಯಾನುಭವವೇನೆಂಬುದನ್ನು ನಾವೀಗ ಊಹಿಸಲೂ ಸಾಧ್ಯವಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು