ಘನಗಂಭೀರ ಮಹಾಘನದೊಳಗಿನ ಘನಕ್ಕೆ ಘನವಾಗಿದ್ದೆನಯ್ಯಾ,
ಕೂಡಲಸಂಗಮದೇವಯ್ಯನೆಂಬ ಮಹಾಬೆಳಗಿನ ಬೆಳಗಿನೊಳಗಿದ್ದೇನೆಂಬ
ಶಬ್ದ ಮುಗ್ಧವಾದುದೆನೇನೆಂಬೆನಯ್ಯಾ?
Transliteration Ghanagambhīra mahāghanadoḷage ghanakke ghanavāgiddenayyā,
kūḍalasaṅgamadēvayyanemba mahābeḷagina beḷaginoḷagiddēnemba
śabda mugdhavādaddudenēnembenayyā?
Manuscript
English Translation 2 I was greater than the greatest that there is
In the grand Absolute, sublimely great,
How can I tell the way the word
That I'm within the lofty light
Of Lord Kūḍala saṅgama
Was turned to silentness?
Translated by: L M A Menezes, S M Angadi
Hindi Translation घन गंभीर महाघन में
महान से भी महान हूँ ।
कूडलसंगमदेव रूपी महाप्रकाश के
दिव्य तेज में हूँ इस शब्द-मुग्ध स्थिति का
वर्णन कैसे करूँ ?
Translated by: Banakara K Gowdappa
Telugu Translation ఘనగం;óర మహాఘనఘనతకు ఘనమై యుంటినయ్యా!
సంగయ్య యను మహా వెల్గున వెలుగై యుంటినయ్యా!
శబ్దము ముగ్ధమైపోవుచుండ నిక యేమందునయ్యా .
Translated by: Dr. Badala Ramaiah
Marathi Translation
घनगंभीर महाधनात घनाला घन झाली.
कूडलसंगमदेवरुपी महाप्रकाशाच्या देवा महाप्रकाशामध्ये
शब्द मुग्धतेचे वर्णन कसे सांगू देवा ?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಘನಗಂಭೀರ ಮಹಾಘನದೊಳಗೆ ಘನಕ್ಕೆ ಘನವಾಗಿದ್ದೆನೆಂದು ತಮ್ಮ ಶಿವೈಕ್ಯಸ್ಥಿತಿಯನ್ನು ಬಸವಣ್ಣನವರು ಬಣ್ಣಿಸುತ್ತಿರುವರು. ಮಹಾಬೆಳಗಿನ ಬೆಳಗಿನೊಳಗೆ ತಾವು ಬೆಳಗಾದಂತೆ-ಅವರನುಭವ. ಶಬ್ದವಿಲ್ಲದ ಸಿಡಿಲಿನಂತೆ –ಅವರು ಶುದ್ಧಪ್ರಕಾಶದಲ್ಲಿ ನಟ್ಟು ಬಚ್ಚಬರಿಯ ಬೆಳಕೇ ಆಗಿದ್ದರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು