•  
  •  
  •  
  •  
Index   ವಚನ - 959    Search  
 
ಐಕ್ಯನ ಶರಣಸ್ಥಲ - ಮುಕ್ತಿ
ಸಮಸ್ತ ಕತ್ತಲೆಯ ಮಸಕವ ಕಳೆದಿಪ್ಪ ಇರುವ ನೋಡಾ ! ಬೆಳಗಿಂಗೆ ಬೆಳಗು ಸಿಂಹಾಸನವಾಗಿ, ಬೆಳಗು ಬೆಳಗ ಕೂಡಿದ ಕೂಟವ ಕೂಡಲಸಂಗಯ್ಯ ತಾನೇ ಬಲ್ಲ !
Transliteration Samasta kattaleya masakava kaḷedippa irava nōḍā! Beḷagige beḷagu sinhāsanavāgi, beḷagu beḷagu kūḍida kūṭava kūḍalasaṅgayya tānē balla!
Manuscript
English Translation 2 Look at the being that remains When all the murky darkness is dispelled! While light on light has been enthroned, Lord Kūḍala Saṅgama alone knows The union that ensues When light is wedded unto light! Translated by: L M A Menezes, S M Angadi
Hindi Translation समस्त अंधकार की कालिमा से मुक्त स्थिति देखो। प्रकाशार्थ प्रकाश सिंहासन बनकर प्रकाश से प्रकाश का संगम कूडलसंगमदेव स्वयं जानते हैं॥ Translated by: Banakara K Gowdappa
Telugu Translation సకలాంధకార తమసము జారుకొను గతి చూడుమా! వెల్గులకు వెల్గు సింహాసనమై వెల్గు వెలుగున గూడు కూటమి కూడల సంగయ్య తానే యెఱుగునయ్యా! Translated by: Dr. Badala Ramaiah
Marathi Translation समस्त अंधकाराचा अंधार नष्ट करणाऱ्याचे स्वरुप पहा! प्रकाशात प्रकाश हे सिंहासन आहे. प्रकाशात प्रकाशाचे झालेले मिलन कूडलसंगय्या तुम्हीच जाणता ! Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಐಕ್ಯಸ್ಥಿತಿಯಲ್ಲಿ ನೆರಳಿಲ್ಲದ ನಿರಂಜನ ಬೆಳಕು ತಾನೇ ತಾನಾಗಿರುವುದು. ಆ ನಿರ್ದ್ವಂದ್ವ ನಿತರಾಂ ಬೆಳಕಿನಲ್ಲಿ ಜೀವನು ತಾನು ಬೆಳಗನಪ್ಪಿ ಬೆಳಗಾಗಿ ಶಿವನಲ್ಲಿ ಏಕವಾದ ಮೇಲೆ ಆ ಶಿವ-ಜೀವರ ಕೂಟವನ್ನು ವರ್ಣಿಸುವುದಿನ್ನೆಲ್ಲಿ !?

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು