ಐಕ್ಯನ ಶರಣಸ್ಥಲ - ಲಿಂಗನಿಷ್ಠೆ
ಅಂತರಂಗ ಬಹಿರಂಗ ಆತ್ಮಸಂಗ ಒಂದೇ ಅಯ್ಯಾ !
ನಾದಬಿಂದು ಕಳಾತೀತ, ಆದಿಯಾಧಾರ-ನೀನೇ, ಅಯ್ಯಾ !
ಆರೂಢದ ಕೂಟದ ಸುಖವ ಕೂಡಲಸಂಗಯ್ಯ ತಾನೇ ಬಲ್ಲ !
Transliteration Antaraṅga bahiraṅga ātmasaṅga ondē ayyā!
Nādabindu kaḷātīta, ādiyādhāra-nīnē, ayyā!
Ārūḍhada kūṭada sukhava kūḍalasaṅgayya tānē balla!
Manuscript
English Translation 2 The outer and the inner now are one -
Soul married unto soul! Thou art, O Lord,
Beyond Nāda, Bindu, Kala; Thou art
The ground and origin!
LordKūḍala Saṅga alone the joy
Of union at the Height!
Translated by: L M A Menezes, S M Angadi
Hindi Translation अंतरंग, बहिरंग, आत्मसंग एक ही है ।
नादबिंदुकलातीत, आदियाधार तुम ही हो स्वामी ।
आरूढ़ का मिलन-सुख कूड़लसंगमदेव स्वयं जानते हैं॥
Translated by: Banakara K Gowdappa
Telugu Translation అంతరంగ బహిరంగము లాత్మ సంగమ మొకటేనయ్యా!
ఆదియాధారము నీవేనయ్యా! కూడల సంగయ్యా!
ఆరూఢ కూటస్థ సుఖము నీకే తెలియునయ్యా!
Translated by: Dr. Badala Ramaiah
Marathi Translation
अंतरंग, बहिरंग, आत्मसंग एकच देवा!
नादबिंदू, कलातीत, आदिआधार तुम्हीच देवा !
आरुढ मिलनाचे सुख कूडलसंगय्या तुम्हीच जाणता !
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಈ ಐಕ್ಯಸ್ಥಿತಿಯ ಆತ್ಮರತಿಗೆ ಅಂತರಂಗವಿಲ್ಲ, ಬಹಿರಂಗವಿಲ್ಲ, ನಾದಬಿಂದು ಕಳೆಯ ವಿಜೃಂಭಣೆಯೆಲ್ಲ ಮುಗಿದು-ಮುಂದೆ ಬರುವ ಆದಿಗೆ ಆಧಾರವಾಗಿ ಆರೂಢದಲ್ಲಿರುವ ಅದ್ವಿತೀಯ ಶಿವನಲ್ಲಿ ಲೀನವಾದ ಜೀವನಿಗೆ ಕೂಡಲಿನ್ನೊಂದಿಲ್ಲ, ಕೊಡಲಿನ್ನೊಂದಿಲ್ಲ, ಪಡೆಯಲಿನ್ನೊಂದಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು