•  
  •  
  •  
  •  
Index   ವಚನ - 5    Search  
 
ಬಂಗಾರಕ್ಕೆ ಒಳಹೊರಗುಂಟೆ ? ಕರ್ಪುರ ಚಂದನ ಅಗರು ಇರವಂತಿ ಶಾವಂತಿ ಮೊಲ್ಲೆ ಮಲ್ಲಿಗೆ ಅದ್ರಗಂಚಿ ಮರುಗ ದವನ ಪಚ್ಚೆ ಮುಡಿವಾಳ ಕೇತಕಿ ಮುಂತಾದ ಸಕಲ ಪುಷ್ಪಪತ್ರೆಗಳಿಗೆ ಒಳಹೊರಗುಂಟೆ ? ಅವರಂದವುಳ್ಳನ್ನಕ್ಕ ಸರ್ವಾಂಗದಲ್ಲಿ ಗಂಧಪರಿಪೂರ್ಣಮಾಗಿರ್ಪುದದರಂತೆ ಕಮಠೇಶ್ವರಲಿಂಗದಲ್ಲಿ ಉಭಯ ಮುಟ್ಟಳಿದ ಶರಣನಿರವು.
Transliteration Baṅgārakke oḷahoraguṇṭe? Karpura candana agaru iravanti śāvanti molle mallige adragan̄ci maruga davana pacce muḍivāḷa kētaki muntāda sakala puṣpapatregaḷige oḷahoraguṇṭe? Avarandavuḷḷannakka sarvāṅgadalli gandhaparipūrṇamāgirpudadarante kamaṭhēśvaraliṅgadalli ubhaya muṭṭaḷida śaraṇaniravu.