ಅಂಥ ಬ್ರಹ್ಮಾಂಡವ ಹನ್ನೊಂದು ಲಕ್ಷದ ಮೇಲೆ
ಸಾವಿರದ ನೂರಾ ಎಂಟು
ಬ್ರಹ್ಮಾಂಡವನೊಳಕೊಂಡುದೊಂದು ಶ್ರೀಶೈಲವೆಂಬ ಭುವನ.
ಆ ಭುವನದೊಳು ಶೈಲೇಂದ್ರನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರಐವತ್ತುಕೋಟಿ ಇಂದ್ರ-ಚಂದ್ರಾದಿತ್ಯರು
ಬ್ರಹ್ಮ-ನಾರಾಯಣರು ರುದ್ರಾದಿಗಳಿಹರು ನೋಡಾ.
ಐನೂರೈವತ್ತುಕೋಟಿ ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Antha brahmāṇḍava hannondu lakṣada mēle
sāvirada nūrā eṇṭu
brahmāṇḍavanoḷakoṇḍudondu śrīśailavemba bhuvana.
Ā bhuvanadoḷu śailēndranemba mahārudramūrti ihanu.
Ā rudramūrtiya ōlagadalli
ainūra'aivattukōṭi indra-candrādityaru
brahma-nārāyaṇaru rudrādigaḷiharu nōḍā.
Ainūraivattukōṭi vēdapuruṣaru
munīndraru dēvarkaḷiharu nōḍā
apramāṇakūḍalasaṅgamadēvā.