ಇನ್ನು ಬ್ರಹ್ಮಾಂಡಕಪಾಲದೊಳಗಣ
ಸೃಷ್ಟಿಯ ವಿಸ್ತೀರ್ಣವದೆಂತೆಂದಡೆ:
ಆ ಭುವನಂಗಳು ಇಹ ಕ್ರಮವೆಂತೆಂದಡೆ:
ಬ್ರಹ್ಮಾಂಡಕಪಾಲ ಸಹಸ್ರಕೋಟಿ ಯೋಜನ ಪ್ರಮಾಣು.
ಅದರೊಳಗಾಗಿ ಅತಳಲೋಕ ಇಪ್ಪತ್ತೊಂದುಕೋಟಿ ಯೋಜನದಲ್ಲಿ
ಶಿವನ ಆಜ್ಞಾಶಕ್ತಿಯಿಂದ ಆಧಾರಶಕ್ತಿ ಇಹಳು.
ಆ ಆಧಾರಶಕ್ತಿಯ ಉದ್ದ ಗಾತ್ರದೊಳಗಾಗಿ
ಐದು ಸಾವಿರಕೋಟಿ ಯೋಜನದಲ್ಲಿ ವಿತಳಲೋಕವಿಹುದು.
ಆ ವಿತಳಲೋಕ ಆರುಸಾವಿರಕೋಟಿ ಯೋಜನಪ್ರಮಾಣು.
ಆ ವಿತಳಲೋಕದ ಮೇಲೆ ಐದುಸಾವಿರಕೋಟಿ ಯೋಜನದಲ್ಲಿ
ಸುತಳಲೋಕವಿಹುದು.
ಆ ಸುತಳಲೋಕ ಅಗ್ನಿ ಜ್ವಾಲೆಯಾಗಿಹುದು.
ಆ ಸುತಳಲೋಕದೊಳು ಕಾಲಾಗ್ನಿ ರುದ್ರರಿಹರು.
ಆ ಸುತಳಲೋಕದ ಮೇಲೆ ಐದುಸಾವಿರಕೋಟಿಯೋಜನದಲ್ಲಿ
ರಸಾತಳಲೋಕವಿಹುದು.
ಆ ರಸಾತಳಲೋಕ ಬಯಲಾಗಿಹುದು.
ಆ ರಸಾತಳಲೋಕದ ಮೇಲೆ ಐದುಸಾವಿರಕೋಟಿಯೋಜನದಲ್ಲಿ
ತಳಾತಳಲೋಕವಿಹುದು.
ಆ ತಳಾತಳಲೋಕ ಮಹಾಗ್ನಿ ಜ್ವಾಲೆಯಾಗಿಹುದು.
ಆ ತಳಾತಳಲೋಕದ ಮೇಲೆ ಮಹಾತಳಲೋಕವಿಹುದು.
ಆ ಮಹಾತಳಲೋಕದ ಮೇಲೆ ಪಾತಾಳಲೋಕವಿಹುದು.
ಆ ಪಾತಾಳಲೋಕ ಎಂಬತ್ತು ಸಾವಿರ ಕೋಟಿ ಯೋಜನ ಭೂಮಿಯಮೇಲೆ
ಜಲಮಯವಾಗಿಹುದು.
ಆ ಜಲಮಯವಾಗಿಹ ಪಾತಾಳಲೋಕವು
ಆಧಾರಶಕ್ತಿಯ ಆಜ್ಞೆಯಿಂದ ಹದಿನಾರು ದಿಕ್ಕುಗಳಲ್ಲಿಯೂ
ಹದಿನಾರುಮಹಾಭೂತಂಗಳು ಸುತ್ತಿಹವು.
ಹದಿನಾರುಭೂತಗಣಂಗಳ ನಡುವೆ ಕೂರ್ಮಾಂಡನೆಂಬ ಮಹಾಕೂರ್ಮನ
ಅಗಲವದೆಂತೆಂದಡೆ:
ಐದುಸಾವಿರಕೋಟಿ ವಿಸ್ತೀರ್ಣದಗಲ ನೋಡಾ.
ಆ ಕೂರ್ಮಾಂಡನೆಂಬ ಮಹಾಕೂರ್ಮನ ಉದ್ದ
ಹದಿನೆಂಟುಸಾವಿರಕೋಟಿಯೋಜನ ಪರಿಪ್ರಮಾಣುದ್ದದ ಬೆನ್ನ ಮೇಲೆ
ಶತಕೋಟಿಯೋಜನ ಪರಿಪ್ರಮಾಣುದ್ದದ ಭೂಮಿಯ ಮೇಲೆ
ಐನೂರು ಶಿರಸ್ಸನುಳ್ಳ ಶೇಷನು, ನಾಲ್ವತ್ತುಸಾವಿರ ಶೇಷನು
ವಳಯಾಕೃತವಾಗಿ ಸುತ್ತಿರಲು,
ಆ ನಾಲ್ವತ್ತುಸಾವಿರ ಶೇಷನ ಒಳಯಾಕೃತದಲ್ಲಿ,
ಮಧ್ಯದಲ್ಲಿ ಶೇಷಾಹಿಯೆಂಬ ಮಹಾನಾಗ ಇಪ್ಪುದು.
ಆ ಶೇಷಾಹಿಯೆಂಬ ಮಹಾನಾಗವು ಎಂಟುಸಾವಿರಕೋಟಿ
ಯೋಜನಪ್ರಮಾಣು ನೀಳವು.
ಹತ್ತುಸಾವಿರಕೋಟಿ ಸುತ್ತು ವಿಸ್ತೀರ್ಣವು.
ಐದುಸಾವಿರ ಕೋಟಿ ಅಗಲದ ಹೆಡೆಯು.
ಸ್ವರ್ಗ ಜ್ಯೋತಿಪ್ರಕಾಶದ ದೇಹವನುಳ್ಳುದಾಗಿ,
ಸಹಸ್ರ ಶಿರ, ದ್ವಿಸಹಸ್ರಾಕ್ಷವು.
ಆ ಸಹಸ್ರ ಶಿರದಲ್ಲಿ ಮಾಣಿಕ್ಯದ ಬಟ್ಟುಗಳ ಧರಿಸಿಕೊಂಡು
ಮಹಾಗ್ನಿಜ್ವಾಲೆಯನುಳ್ಳ ಮಹಾಶೇಷನಿಹನು.
ಐನೂರು ಶಿರಸ್ಸನುಳ್ಳ ಶೇಷ ನೂರುನಾಲ್ವತ್ತುಸಾವಿರ ಶೇಷನ
ಸುತ್ತುವಳಯಾಕೃತವಾಗಿ ಅಷ್ಟದಿಗ್ಗಜಂಗಳಿಹವು.
ಆ ಅಷ್ಟದಿಗ್ಗಜಂಗಳ ಮೇಲೆ ವಿಸ್ತೀರ್ಣ
ಒಂದೊಂದು ಗಜಂಗಳು ನವಕೋಟಿಯೋಜನಪ್ರಮಾಣದುದ್ದವು,
ಸಾವಿರಕೋಟಿಯೋಜನಪ್ರಮಾಣದಗಲವು,
ಶತಕೋಟಿಸಾವಿರಯೋಜನಪ್ರಮಾಣದ ನೀಳವನುಳ್ಳುದಾಗಿ
ಅಷ್ಟದಿಕ್ ಮಹಾಗಜಂಗಳಿಹವು.
ಆ ಅಷ್ಟದಿಕ್ಮ ಮಹಾಗಜಂಗಳು ಆಧಾರವಾಗಿ
ಭೂಲೋಕವಿಹುದು.
ಆ ಭೂಲೋಕ ಮೊದಲಾಗಿ ಕೆಳಗಿನಂಡಬ್ರಹ್ಮಾಂಡಕಪಾಲ ಕಡೆಯಾಗಿ
ಅರುವತ್ತುಸಾವಿರಕೋಟಿಯೋಜನ ಪರಿಪ್ರಮಾಣು.
ಆ ಭುವರ್ಲೋಕವು ಸಾವಿರಕೋಟಿಯೋಜನಪರಿಪ್ರಮಾಣು
ಉದ್ದ ಕಬ್ಬುಣವಾಗಿಹುದು.
ಸಾವಿರಕೋಟಿಯೋಜನಪರಿಪ್ರಮಾಣು ಉದ್ದ ಮಣ್ಣಾಗಿಹುದು.
ಇದು ಮಧ್ಯಭೂಮಿ. ಈ ಮಧ್ಯಭೂಮಿ ಅಜಲಮಯವಾಗಿ
ಉತ್ತರ-ದಕ್ಷಿಣ ಶತಸಹಸ್ರಕೋಟಿಯೋಜನಪರಿಪ್ರಮಾಣು.
ಸುತ್ತ ಅಗಲ ಮುನ್ನೂರರುವತ್ತುಕೋಟಿಯೋಜನಪರಿಪ್ರಮಾಣು.
ದಕ್ಷಿಣ-ಉತ್ತರ ಸಮುದ್ರ ತೊಡಗಿ ಉತ್ತರ ಹಿಮವತ್ಪರ್ವತ.
ಇದಕ್ಕೆ ಹೆಸರು ಭರತವರುಷ.
ಈ ಹಿಮವತ್ಪರ್ವತವು ಉತ್ತರ ದಕ್ಷಿಣ ಇಪ್ಪತ್ತುಸಾವಿರ ಯೋಜನಪ್ರಮಾಣು.
ಕೆಳಗೆ ಮೇಲೆ ಇಪ್ಪತ್ತುಸಾವಿರಯೋಜನಪ್ರಮಾಣು.
ಮೇಲುದ್ದವು ಎಂಬತ್ತೈದುಸಾವಿರಯೋಜನಪ್ರಮಾಣು.
ಉತ್ತರ ಸಮುದ್ರಕ್ಕೆ ದಕ್ಷಿಣ ಉತ್ತರ ಸಾವಿರಕೋಟಿ ಯೋಜನದಲ್ಲಿ
ವಿಂಧ್ಯಪರ್ವತವಿಹುದು.
ಆ ವಿಂಧ್ಯಪರ್ವತದ ಮೇಲುದ್ದವು ತೊಂಬತ್ಮೂರುಸಾವಿರ,
ದಕ್ಷಿಣ ಉತ್ತರ ಮೂವತ್ತುಸಾವಿರಯೋಜನಪ್ರಮಾಣು.
ಕೆಳಗು ಮೇಲು ಮೂವತ್ತುಸಾವಿರಯೋಜನಪ್ರಮಾಣು.
ಆ ವಿಂಧ್ಯಪರ್ವತದ ಮೇಲುದ್ದವು
ತೊಂಬತ್ತುನೂರುಸಾವಿರಯೋಜನ ಪ್ರಮಾಣು.
ಪಶ್ಚಿಮದೆಸೆಯ ಸಮುದ್ರದಲ್ಲಿಹ ಅಸ್ತಮಾನಪರ್ವತ.
ಆ ಪರ್ವತ ದಕ್ಷಿಣ-ಉತ್ತರ ಮೂವತ್ತೈದುಸಾವಿರ ಯೋಜನಪ್ರಮಾಣು.
ಆ ಪರ್ವತದ ಕೆಳಗು ಮೇಲು ಮೂವತ್ತೈದುಸಾವಿರ ಯೋಜನಪ್ರಮಾಣು.
ಆ ಪರ್ವತದ ಮೇಲುದ್ದವು ತೊಂಬತ್ತುಸಾವಿರ ಯೋಜನಪ್ರಮಾಣು
ಭೂಮಿಗೆ ನಡುವಾಗಿ ಮಹಾಮೇರುಪರ್ವತವಿಹುದು.
ಆ ಮೇರುಪರ್ವತದ ಉತ್ತರ ದಕ್ಷಿಣ ಹದಿನಾರುಸಾವಿರ ಯೋಜನಪ್ರಮಾಣು.
ಆ ಮೇರುಪರ್ವತದ ಮೇಲುದ್ದವು ಸಾವಿರಕೋಟಿಯ ಮೇಲೆ
ನೂರುಸಾವಿರದ ಎಂಬತ್ತುನಾಲ್ಕುಸಾವಿರ ಯೋಜನಪ್ರಮಾಣು.
ಭೂಮಿಯಲ್ಲಿ ಹೂಳಿಹುದು
ಎಂಬತ್ತುನಾಲ್ಕುಸಾವಿರಕೋಟಿ ಯೋಜನ ಪ್ರಮಾಣು.
ಆ ಮಹಾಮೇರುವಿನ ಪೂರ್ವದಿಕ್ಕಿನಲ್ಲಿ ಮಂದರಪರ್ವತವಿಹುದು.
ಅಲ್ಲಿಹ ವೃಕ್ಷ ಕದಂಬವೃಕ್ಷ.
ಆ ಮಹಾಮೇರುವಿನ ದಕ್ಷಿಣದಿಕ್ಕಿನಲ್ಲಿ ಗಂಧಮಾದನಪರ್ವತವಿಹುದು.
ಅಲ್ಲಿಹ ವೃಕ್ಷ ಜಂಬೂವೃಕ್ಷ.
ಆ ಮಹಾಮೇರುವಿನ ನೈಋತ್ಯದಿಕ್ಕಿನಲ್ಲಿ ನೀಲಗಿರಿಪರ್ವತವಿಹುದು.
ಅಲ್ಲಿಹ ವೃಕ್ಷ ಭೂದಳವೃಕ್ಷ.
ಆ ಮಹಾಮೇರುವಿನ ಪಶ್ಚಿಮದಿಕ್ಕಿನಲ್ಲಿ ಕಾಶೀಪರ್ವತವಿಹುದು.
ಅಲ್ಲಿಹ ವೃಕ್ಷ ಬಿಲ್ವದ ವೃಕ್ಷ.
ಆ ಮಹಾಮೇರುವಿನ ವಾಯುವ್ಯದಿಕ್ಕಿನಲ್ಲಿ ನೀಲಪರ್ವತವಿಹುದು.
ಅಲ್ಲಿಹ ವೃಕ್ಷ ಬ್ರಹ್ಮವೃಕ್ಷ.
ಆ ಮಹಾಮೇರುವಿನ ಉತ್ತರದಿಕ್ಕಿನಲ್ಲಿ ಮಧುರಾದ್ರಿಪರ್ವತವಿಹುದು.
ಅಲ್ಲಿಹ ವೃಕ್ಷ ವಟವೃಕ್ಷ.
ಆ ಮಹಾಮೇರುವಿನ ಈಶಾನ್ಯದಿಕ್ಕಿನಲ್ಲಿ ಕಪಿಲ ಮಹಾಪರ್ವತವಿಹುದು.
ಅಲ್ಲಿಹ ವೃಕ್ಷ ಶಾಕಾಫಲವೃಕ್ಷ.
ಸಪ್ತಕುಲಪರ್ವತಂಗಳು ಒಂದೊಂದು ಬಗೆ ಹತ್ತುಸಾವಿರ
ಯೋಜನಪ್ರಮಾಣು.
ಆ ಸಪ್ತಕುಲಪರ್ವತಂಗಳೊಂದೊಂದಿಗೆ ಐದುಸಾವಿರ ಯೋಜನಪ್ರಮಾಣು.
ಈ ಸಪ್ತಕುಲಪರ್ವತಂಗಳ ನಡುವೆ ಮಹಾಮೇರುಪರ್ವತವಿಹುದು.
ಆ ಮೇರುಪರ್ವತದ ತುದಿಯಲ್ಲಿ ಪಂಚಸಹಸ್ರಯೋಜನದಗಲ
ಚುತುಃಚಕ್ರಾಕಾರವಾಗಿ
ಅಷ್ಟದಳವೇಷ್ಟಿತವಾಗಿ ಅಷ್ಟಧಾನ್ಯಂಗಳುಂಟಾಗಿಹಂತೆ
ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ
ನವರತ್ನಖಚಿತವಾಗಿ ಪ್ರಮಥಗಣಂಗಳು
ನಂದಿ, ಮಹಾನಂದಿಕೇಶ್ವರಗಣಂಗಳು, ಅಷ್ಟದಿಕ್ಪಾಲರು,
ಏಕಾದಶರುದ್ರರು, ದ್ವಾದಶಾದಿತ್ಯರು, ನವಗ್ರಹಂಗಳು,
ಬ್ರಹ್ಮ ವಿಷ್ಣು ನಾರದರಿಂ ಸುಖಂಗಳಲಿಪ್ಪಂತಾಗಿ ಶಿವಪುರವಿಹುದು.
ಆ ಶಿವಪುರದೊಳು ಸಿಂಹಾಸನಾರೂಢನಾಗಿ ಮಹಾರುದ್ರಮೂರ್ತಿ ಇಹನು.
ಆ ಮಹಾರುದ್ರಮೂರ್ತಿಯ ಚಂದ್ರಾದಿತ್ಯರು, ನಕ್ಷತ್ರ ನವಗ್ರಹಂಗಳು
ಮೊದಲಾಗಿ ಎಲ್ಲಾ ದೇವರ್ಕಳು ಪ್ರದಕ್ಷಣಬಹರು.
ಯಕ್ಷ ಕಿನ್ನರ ಗಂಧರ್ವ ಸಿದ್ಧ ವಿದ್ಯಾಧರ
ಬ್ರಹ್ಮ ವಿಷ್ಣು ಇಂದ್ರಾದಿ ದೇವರ್ಕಳೆಲ್ಲರು
ಒಡ್ಡೋಲಗಂಗೊಟ್ಟಿರಲು ಎಲ್ಲ ಲೋಕಕ್ಕೂ ಸಾಕ್ಷೀಭೂತನಾಗಿ
ಆ ಮಹಾರುದ್ರಮೂರ್ತಿ ಇಹನು.
ಆ ಮಹಾಮೇರುವಿನ ದಕ್ಷಿಣದ ಕೆಳಗಣ ಪಾರ್ಶ್ವದಲ್ಲಿ
ಚಿಕ್ಕದೊಂದು ಕೋಡು.
ಆ ಕೋಡಿನಲ್ಲಿ ಕಲ್ಪವೃಕ್ಷವಿಹುದು.
ಆ ದಕ್ಷಿಣ ಕೋಡಿನಲ್ಲಿ ಜಂಬೂವೃಕ್ಷದ ಹಣ್ಣಿನ ರಸ ಸೋರಿ
ಜಾಂಬೋಧಿಯೆಂಬ ಮಹಾನದಿ ಹರಿಯುತ್ತಿಹುದು.
ಆ ನೀರ ಸೇವಿಸಿದವರು ಸ್ವರ್ಣವರ್ಣವಹರು.
ಆ ನೀರು ಹರಿದ ಠಾವೆಲ್ಲ ಸ್ವರ್ಣಬೆಳೆಭೂಮಿ.
ಆ ಭೂಮಿಗೆ ಉತ್ತರ ಪೂರ್ವವಾಗಿ ಶ್ರೀ ಕೈಲಾಸಪರ್ವತವಿಹುದು.
ಆ ಕೈಲಾಸಪರ್ವತ ಏಳು ನೆಲೆಯಾಗಿ
ರತ್ನಮಯವಾಗಿ ಅನಂತ ಕೋಡುಗಳುಂಟಾಗಿಹುದು.
ಆ ಕೈಲಾಸಪರ್ವತವು ಉತ್ತರ ದಕ್ಷಿಣ
ಹದಿನಾರುಸಾವಿರಕೋಟಿಯೋಜನ ಪರಿಪ್ರಮಾಣು.
ಆ ಕೈಲಾಸಪರ್ವತದ ಮೇಲುದ್ದವು ಸಾವಿರಕೋಟಿ
ನೂರುಸಾವಿರದ ಮೇಲೆ ಎಂಬತ್ತುನಾಲ್ಕುಸಾವಿರ ಯೋಜನಪ್ರಮಾಣು.
ಭೂಮಿಯಲ್ಲಿ ಹೂಳಿಹುದು
ಎಂಬತ್ತುನಾಲ್ಕುಸಾವಿರಕೋಟಿ ಯೋಜನ ಪ್ರಮಾಣು.
ಆ ಕೈಲಾಸಪರ್ವತದ ತುದಿಯಲ್ಲಿ
ಶಿವಪುರದ ವಿಸ್ತೀರ್ಣ ಪಂಚಸಹಸ್ರ ಯೋಜನದಗಲ.
ಚತುಷ್ಟಾಕಾರವಾಗಿ ನವರತ್ನಖಚಿತವಾಗಿ
ಅಷ್ಟದಳವೇಷ್ಟಿತವಾಗಿ ಅಷ್ಟಧಾನ್ಯಂಗಳುಂಟಾಗಿಹಂತೆ
ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ
ಪ್ರಮಥಗಣಂಗಳು, ನಂದಿ ಮಹಾನಂದಿಕೇಶ್ವರಗಣಂಗಳು,
ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು
ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದ ಸುಖಂಗಳಲ್ಲಿಪ್ಪಂತಾಗಿ
ಮಹಾಶಿವಪುರವಿಹುದು.
ಆ ಶಿವಪುರದೊಳು ಶ್ರೀಕಂಠನೆಂಬ ಸದಾಶಿವಮೂರ್ತಿ ಇಹನು.
ಆ ಶಿವಪುರದ ಬಾಗಿಲ ಕಾವಲಾಗಿ
ನಂದಿ-ಮಹಾಕಾಳರೆಂಬ ಮಹಾಗಣಂಗಳಿಹರು.
ನಂದಿ-ಮಹಾನಂದಿ-ಅತಿಮಹಾನಂದಿಕೇಶ್ವರರು
ವಿಘ್ನೇಶ್ವರ ಕುಮಾರಸ್ವಾಮಿ ಮಹಾಭೈರವೇಶ್ವರ
ಮಹಾಕಾಳಿ ಮೊದಲಾದ ಅಸಂಖ್ಯಾತ ಮಹಾಗಣಂಗಳು
ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು,
ಅಷ್ಟವಶುಗಳು, ನವಗ್ರಹಂಗಳು, ಬ್ರಹ್ಮ , ವಿಷ್ಣು , ರುದ್ರಗಣಂಗಳು,
ಮೂವತ್ಮೂರುಕೋಟಿ ದೇವರ್ಕಳು, ನಾಲ್ವತ್ತೆಂಟುಸಾವಿರ ಮುನಿಗಳು,
ಅಷ್ಟದಶ ಗಣಂಗಳು, ಯೋಗೀಶ್ವರರು,
ಯಕ್ಷ ಕಿನ್ನರ ಗರುಡ ಗಂಧರ್ವ ಸಿದ್ಧ ವಿದ್ಯಾಧರರು,
ರಾಕ್ಷಸಗಣ ನಾಗಗಣ ಭೂತಗಣಂಗಳು
ಮೊದಲಾದ ಎಲ್ಲಾ ಗಣಂಗಳ ಸನ್ನಿಧಿಯಲ್ಲಿ ಒಡ್ಡೋಲಗಂಗೊಟ್ಟಿರಲು,
ಚತುರ್ವೇದಂಗಳು ಮೊದಲಾಗಿ ಎಲ್ಲಾ ವೇದಂಗಳು
`ವಿಶ್ವಾಧಿಕೋ ರುದ್ರೋ ಮಹಾಋಷಿ' ಎನಲು
'ಋತಂ ಸತ್ಯಂ ಪರಬ್ರಹ್ಮ' ಎನಲು
`ಅತ್ಯತಿಷ್ಟರ್ದಶಾಂಗುಲಂ' ಎನಲು
Transliteration Innu brahmāṇḍakapāladoḷagaṇa
sr̥ṣṭiya vistīrṇavadentendaḍe:
Ā bhuvanaṅgaḷu iha kramaventendaḍe:
Brahmāṇḍakapāla sahasrakōṭi yōjana pramāṇu.
Adaroḷagāgi ataḷalōka ippattondukōṭi yōjanadalli
śivana ājñāśaktiyinda ādhāraśakti ihaḷu.
Ā ādhāraśaktiya udda gātradoḷagāgi
aidu sāvirakōṭi yōjanadalli vitaḷalōkavihudu.
Ā vitaḷalōka ārusāvirakōṭi yōjanapramāṇu.
Ā vitaḷalōkada mēle aidusāvirakōṭi yōjanadalli
sutaḷalōkavihudu.
Ā sutaḷalōka agni jvāleyāgihudu.
Ā sutaḷalōkadoḷu kālāgni rudrariharu.
Ā sutaḷalōkada mēle aidusāvirakōṭiyōjanadalli
rasātaḷalōkavihudu.
Ā rasātaḷalōka bayalāgihudu.
Ā rasātaḷalōkada mēle aidusāvirakōṭiyōjanadalli
taḷātaḷalōkavihudu.
Ā taḷātaḷalōka mahāgni jvāleyāgihudu.
Ā taḷātaḷalōkada mēle mahātaḷalōkavihudu.
Ā mahātaḷalōkada mēle pātāḷalōkavihudu.
Ā pātāḷalōka embattu sāvira kōṭi yōjana bhūmiyamēle
jalamayavāgihudu.
Ā jalamayavāgiha pātāḷalōkavu
ādhāraśaktiya ājñeyinda hadināru dikkugaḷalliyū
hadinārumahābhūtaṅgaḷu suttihavu.
Hadinārubhūtagaṇaṅgaḷa naḍuve kūrmāṇḍanemba mahākūrmana
agalavadentendaḍe:
Aidusāvirakōṭi vistīrṇadagala nōḍā.
Ā kūrmāṇḍanemba mahākūrmana udda
hadineṇṭusāvirakōṭiyōjana paripramāṇuddada benna mēle
śatakōṭiyōjana paripramāṇuddada bhūmiya mēle
ainūru śiras'sanuḷḷa śēṣanu, nālvattusāvira śēṣanu
vaḷayākr̥tavāgi suttiralu,
Ā nālvattusāvira śēṣana oḷayākr̥tadalli,
madhyadalli śēṣāhiyemba mahānāga ippudu.
Ā śēṣāhiyemba mahānāgavu eṇṭusāvirakōṭi
yōjanapramāṇu nīḷavu.
Hattusāvirakōṭi suttu vistīrṇavu.
Aidusāvira kōṭi agalada heḍeyu.
Svarga jyōtiprakāśada dēhavanuḷḷudāgi,
sahasra śira, dvisahasrākṣavu.
Ā sahasra śiradalli māṇikyada baṭṭugaḷa dharisikoṇḍu
mahāgnijvāleyanuḷḷa mahāśēṣanihanu.
Ainūru śiras'sanuḷḷa śēṣa nūrunālvattusāvira śēṣana
suttuvaḷayākr̥tavāgi aṣṭadiggajaṅgaḷihavu.
Ā aṣṭadiggajaṅgaḷa mēle vistīrṇa
ondondu gajaṅgaḷu navakōṭiyōjanapramāṇaduddavu,
sāvirakōṭiyōjanapramāṇadagalavu,
śatakōṭisāvirayōjanapramāṇada nīḷavanuḷḷudāgi
aṣṭadik mahāgajaṅgaḷihavu.
Ā aṣṭadikma mahāgajaṅgaḷu ādhāravāgi
bhūlōkavihudu.
Ā bhūlōka modalāgi keḷaginaṇḍabrahmāṇḍakapāla kaḍeyāgi
aruvattusāvirakōṭiyōjana paripramāṇu.
Ā bhuvarlōkavu sāvirakōṭiyōjanaparipramāṇu
udda kabbuṇavāgihudu.
Sāvirakōṭiyōjanaparipramāṇu udda maṇṇāgihudu.
Idu madhyabhūmi. Ī madhyabhūmi ajalamayavāgi
uttara-dakṣiṇa śatasahasrakōṭiyōjanaparipramāṇu.
Sutta agala munnūraruvattukōṭiyōjanaparipramāṇu.
Dakṣiṇa-uttara samudra toḍagi uttara himavatparvata.
Idakke hesaru bharatavaruṣa.
Ī himavatparvatavu uttara dakṣiṇa ippattusāvira yōjanapramāṇu.
Keḷage mēle ippattusāvirayōjanapramāṇu.
Mēluddavu embattaidusāvirayōjanapramāṇu.
Uttara samudrakke dakṣiṇa uttara sāvirakōṭi yōjanadalli
vindhyaparvatavihudu.
Ā vindhyaparvatada mēluddavu tombatmūrusāvira,
dakṣiṇa uttara mūvattusāvirayōjanapramāṇu.
Keḷagu mēlu mūvattusāvirayōjanapramāṇu.
Ā vindhyaparvatada mēluddavu
tombattunūrusāvirayōjana pramāṇu.
Paścimadeseya samudradalliha astamānaparvata.
Ā parvata dakṣiṇa-uttara mūvattaidusāvira yōjanapramāṇu.
Ā parvatada keḷagu mēlu mūvattaidusāvira yōjanapramāṇu.
Ā parvatada mēluddavu tombattusāvira yōjanapramāṇu
bhūmige naḍuvāgi mahāmēruparvatavihudu.
Ā mēruparvatada uttara dakṣiṇa hadinārusāvira yōjanapramāṇu.
Ā mēruparvatada mēluddavu sāvirakōṭiya mēle
nūrusāvirada embattunālkusāvira yōjanapramāṇu.
Bhūmiyalli hūḷihudu
embattunālkusāvirakōṭi yōjana pramāṇu.
Ā mahāmēruvina pūrvadikkinalli mandaraparvatavihudu.
Alliha vr̥kṣa kadambavr̥kṣa.
Ā mahāmēruvina dakṣiṇadikkinalli gandhamādanaparvatavihudu.
Alliha vr̥kṣa jambūvr̥kṣa.
Ā mahāmēruvina nai'r̥tyadikkinalli nīlagiriparvatavihudu.
Alliha vr̥kṣa bhūdaḷavr̥kṣa.
Ā mahāmēruvina paścimadikkinalli kāśīparvatavihudu.
Alliha vr̥kṣa bilvada vr̥kṣa.
Ā mahāmēruvina vāyuvyadikkinalli nīlaparvatavihudu.
Alliha vr̥kṣa brahmavr̥kṣa.
Ā mahāmēruvina uttaradikkinalli madhurādriparvatavihudu.
Alliha vr̥kṣa vaṭavr̥kṣa.
Ā mahāmēruvina īśān'yadikkinalli kapila mahāparvatavihudu.
Alliha vr̥kṣa śākāphalavr̥kṣa.
Saptakulaparvataṅgaḷu ondondu bage hattusāvira
yōjanapramāṇu.
Ā saptakulaparvataṅgaḷondondige aidusāvira yōjanapramāṇu.
Ī saptakulaparvataṅgaḷa naḍuve mahāmēruparvatavihudu.
Ā mēruparvatada tudiyalli pan̄casahasrayōjanadagala
cutuḥcakrākāravāgi
aṣṭadaḷavēṣṭitavāgi aṣṭadhān'yaṅgaḷuṇṭāgihante
śatasahasrakōṭi kanakagr̥haṅgaḷuṇṭāgi
navaratnakhacitavāgi pramathagaṇaṅgaḷu
nandi, mahānandikēśvaragaṇaṅgaḷu, aṣṭadikpālaru,Ēkādaśarudraru, dvādaśādityaru, navagrahaṅgaḷu,
brahma viṣṇu nāradariṁ sukhaṅgaḷalippantāgi śivapuravihudu.
Ā śivapuradoḷu sinhāsanārūḍhanāgi mahārudramūrti ihanu.
Ā mahārudramūrtiya candrādityaru, nakṣatra navagrahaṅgaḷu
modalāgi ellā dēvarkaḷu pradakṣaṇabaharu.
Yakṣa kinnara gandharva sid'dha vidyādhara
brahma viṣṇu indrādi dēvarkaḷellaru
oḍḍōlagaṅgoṭṭiralu ella lōkakkū sākṣībhūtanāgi
ā mahārudramūrti ihanu.
Ā mahāmēruvina dakṣiṇada keḷagaṇa pārśvadalli
cikkadondu kōḍu.
Ā kōḍinalli kalpavr̥kṣavihudu.
Ā dakṣiṇa kōḍinalli jambūvr̥kṣada haṇṇina rasa sōri
jāmbōdhiyemba mahānadi hariyuttihudu.
Ā nīra sēvisidavaru svarṇavarṇavaharu.
Ā nīru harida ṭhāvella svarṇabeḷebhūmi.
Ā bhūmige uttara pūrvavāgi śrī kailāsaparvatavihudu.
Ā kailāsaparvata ēḷu neleyāgi
ratnamayavāgi ananta kōḍugaḷuṇṭāgihudu.
Ā kailāsaparvatavu uttara dakṣiṇa
hadinārusāvirakōṭiyōjana paripramāṇu.
Ā kailāsaparvatada mēluddavu sāvirakōṭi
nūrusāvirada mēle embattunālkusāvira yōjanapramāṇu.
Bhūmiyalli hūḷihudu
embattunālkusāvirakōṭi yōjana pramāṇu.
Ā kailāsaparvatada tudiyalli
śivapurada vistīrṇa pan̄casahasra yōjanadagala.
Catuṣṭākāravāgi navaratnakhacitavāgi
aṣṭadaḷavēṣṭitavāgi aṣṭadhān'yaṅgaḷuṇṭāgihante
śatasahasrakōṭi kanakagr̥haṅgaḷuṇṭāgi
pramathagaṇaṅgaḷu, nandi mahānandikēśvar