ಮತ್ತಂ, ಆ ಶಿಷ್ಯನ ಪ್ರಲಾಪವೆಂತೆಂದಡೆ:
ಅಯ್ಯಾ, ಅನಂತ ಜನ್ಮದಲ್ಲಿ ಮಾಡಿದ ಪಾಪಂಗಳೆಂಬ ಪಂಕವ
ನಿಮ್ಮ ಚಿದ್ವಾಕ್ಯಪ್ರಭೆಯಲ್ಲಿ ಮುಳುಗಿಸುವುದಯ್ಯ.
ಎನ್ನ ಭವಾರಣ್ಯವ ನಿಮ್ಮ ಮಹಾಜ್ಞಾನ ಶಸ್ತ್ರದಲ್ಲಿರಿದು ಖಂಡಿಸುವುದಯ್ಯ.
ಎನ್ನ ಭವರೋಗಂಗಳೆಂಬ ಕಾಷ್ಠಂಗಳ
ನಿಮ್ಮ ಮಹಾಜ್ಞಾನಾಗ್ನಿಯಲ್ಲಿ ದಹಿಸುವುದಯ್ಯ.
ಅಪ್ರಮಾಣಕೂಡಲಸಂಗಮದೇವಾ ಶಿವಧೋ ಶಿವಧೋ.
Transliteration Mattaṁ, ā śiṣyana pralāpaventendaḍe:
Ayyā, ananta janmadalli māḍida pāpaṅgaḷemba paṅkava
nim'ma cidvākyaprabheyalli muḷugisuvudayya.
Enna bhavāraṇyava nim'ma mahājñāna śastradalliridu khaṇḍisuvudayya.
Enna bhavarōgaṅgaḷemba kāṣṭhaṅgaḷa
nim'ma mahājñānāgniyalli dahisuvudayya.
Apramāṇakūḍalasaṅgamadēvā śivadhō śivadhō.