ಜ್ಞಾತೃ ಜ್ಞಾನಂಗಳಿಲ್ಲದಂದು, ಜ್ಞಾನತ್ರಯಂಗಳಿಲ್ಲದಂದು,
ಜೀವಾತ್ಮ ಅಂತರಾತ್ಮ ಪರಮಾತ್ಮರಿಲ್ಲದಂದು,
ತ್ರೈಲೋಕ್ಯ ಸಚರಾಚರರೆಲ್ಲ ರಚನೆಗೆ ಬಾರದಂದು
ಅನಂತಕೋಟಿ ಬ್ರಹ್ಮಾಂಡಗಳನೊಳಕೊಂಡು
ಆದಿ ಮಧ್ಯಾವಸಾನಂಗಳಿಲ್ಲದೆ
ಮಹಾಘನ ಚೈತನ್ಯನಾಗಿದ್ದನಯ್ಯ ಇಲ್ಲದಂತೆ
ನಮ್ಮ ಅಪ್ರಮಾಣಕೂಡಲಸಂಗಮದೇವಾ.
Transliteration Jñātr̥ jñānaṅgaḷilladandu, jñānatrayaṅgaḷilladandu,
jīvātma antarātma paramātmarilladandu,
trailōkya sacarācararella racanege bāradandu
anantakōṭi brahmāṇḍagaḷanoḷakoṇḍu
ādi madhyāvasānaṅgaḷillade
mahāghana caitan'yanāgiddanayya illadante
nam'ma apramāṇakūḍalasaṅgamadēvā.