•  
  •  
  •  
  •  
Index   ವಚನ - 388    Search  
 
ಸಚ್ಚಿದಾನಂದ ಪರಮಾನಂದವಿಲ್ಲದತ್ತತ್ತ, ಚಿದಾತ್ಮ ಪರಮಾತ್ಮವಿಲ್ಲದತ್ತತ್ತ, ಚಿನ್ಮಯ ಚಿದ್ರೂಪ ಚಿತ್ಪ್ರಕಾಶವಿಲ್ಲದತ್ತತ್ತ, ಶಿವಜ್ಞಾನ ಮಹಾಜ್ಞಾನವಿಲ್ಲದತ್ತತ್ತ, ಶಿವನೆಂಬ ನಾಮಸೀಮೆ ಏನೂ ಏನೂ ಎನಲಿಲ್ಲದತ್ತತ್ತ ಕಲಾಪ್ರಣವವಾಗಿದ್ದನಯ್ಯ ನಮ್ಮ ಅಪ್ರಮಾಣಕೂಡಲಸಂಗಮದೇವ.
Transliteration Saccidānanda paramānandavilladattatta, cidātma paramātmavilladattatta, cinmaya cidrūpa citprakāśavilladattatta, śivajñāna mahājñānavilladattatta, śivanemba nāmasīme ēnū ēnū enalilladattatta kalāpraṇavavāgiddanayya nam'ma apramāṇakūḍalasaṅgamadēva