ಆ ಮಾಹೇಶ್ವರನಲ್ಲಿಯ ಐಕ್ಯಂಗೆ
ಅಪ್ಪುವಿನಲ್ಲಿಯ ಆತ್ಮನೇ ಅಂಗ.
ಆ ಅಂಗಕ್ಕೆ ಸುಬುದ್ಧಿಯಲ್ಲಿಯ ಭಾವವೇ ಹಸ್ತ.
ಆ ಹಸ್ತಕ್ಕೆ ಗುರುಲಿಂಗದಲ್ಲಿಯ ಮಹಾಲಿಂಗವೆ ಲಿಂಗ.
ಆ ಮಹಾಲಿಂಗಮುಖದಲ್ಲಿ
ಎಲ್ಲಾ ರುಚಿ ಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Ā māhēśvaranalliya aikyaṅge
appuvinalliya ātmanē aṅga.
Ā aṅgakke subud'dhiyalliya bhāvavē hasta.
Ā hastakke guruliṅgadalliya mahāliṅgave liṅga.
Ā mahāliṅgamukhadalli
ellā ruci samarpaṇavaṁ māḍi
tr̥ptiyane bhōgisuvanu nōḍā
apramāṇakūḍalasaṅgamadēvā