ಇನ್ನು ಆ ಪ್ರಸಾದಿಯಲ್ಲಿಯ ಭಕ್ತಂಗೆ
ಅಗ್ನಿಯಲ್ಲಿಯ ಪೃಥ್ವಿಯೆ ಅಂಗ.
ಆ ಅಂಗಕ್ಕೆ ನಿರಹಂಕಾರದಲ್ಲಿಯ ಸುಚಿತ್ತವೆ ಹಸ್ತ.
ಆ ಹಸ್ತಕ್ಕೆ ಶಿವಲಿಂಗದಲ್ಲಿಯ ಆಚಾರಲಿಂಗವೆ ಲಿಂಗ.
ಆ ಆಚಾರಲಿಂಗಮುಖದಲ್ಲಿ ಪೀತವರ್ಣವಾದ ರೂಪದ್ರವ್ಯವನು
ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Innu ā prasādiyalliya bhaktaṅge
agniyalliya pr̥thviye aṅga.
Ā aṅgakke nirahaṅkāradalliya sucittave hasta.
Ā hastakke śivaliṅgadalliya ācāraliṅgave liṅga.
Ā ācāraliṅgamukhadalli pītavarṇavāda rūpadravyavanu
samarpaṇavaṁ māḍi tr̥ptiyane bhōgisuvanu nōḍā
apramāṇakūḍalasaṅgamadēvā.