ಮರ್ತ್ಯಲೋಕದ ಮಹಾಗಣಂಗಳೆಲ್ಲ ತಾನಿರ್ದಲ್ಲಿ,
ನಾಗಲೋಕದ ನಾಗಗಣಂಗಳೆಲ್ಲ ತಾನಿರ್ದಲ್ಲಿ,
ದೇವಲೋಕದ ದೇವಗಣಂಗಳೆಲ್ಲ ತಾನಿರ್ದಲ್ಲಿ,
ರುದ್ರಲೋಕದ ರುದ್ರಗಣಂಗಳೆಲ್ಲ ತಾನಿರ್ದಲ್ಲಿ,
ಭೃಂಗಿ ವೀರೇಶ್ವರ ನಂದಿ ಮಹಾಕಾಳರೆಂಬ
ಮಹಾಗಣಂಗಳೆಲ್ಲ ತಾನಿರ್ದಲ್ಲಿ,
ತನ್ನಿಂದಧಿಕವಪ್ಪ ಪರತತ್ವವಿಲ್ಲವಾಗಿ
ತಾನೆ ಸ್ವಯಂಭು ನಿರಾಳ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Martyalōkada mahāgaṇaṅgaḷella tānirdalli,
nāgalōkada nāgagaṇaṅgaḷella tānirdalli,
dēvalōkada dēvagaṇaṅgaḷella tānirdalli,
rudralōkada rudragaṇaṅgaḷella tānirdalli,
bhr̥ṅgi vīrēśvara nandi mahākāḷaremba
mahāgaṇaṅgaḷella tānirdalli,
tannindadhikavappa paratatvavillavāgi
tāne svayambhu nirāḷa nōḍā
apramāṇakūḍalasaṅgamadēvā.