ನಿರಾಮಯ ಪ್ರಸಾದಿಗೆ ನಿರಾಮಯವೆ ಅಂಗ,
ನಿರಾಮಯವೆ ಹಸ್ತ, ನಿರಾಮಯವೆ ಶಿವಲಿಂಗ.
ನಿರಾಮಯವೆಂಬ ಮುಖದಲ್ಲಿ
ನಿರಾಮಯಾನಂದವೆಂಬ ಸುಖವ ಸಮರ್ಪಣವ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Nirāmaya prasādige nirāmayave aṅga,
nirāmayave hasta, nirāmayave śivaliṅga.
Nirāmayavemba mukhadalli
nirāmayānandavemba sukhava samarpaṇava māḍi
tr̥ptiyane bhōgisuvanu nōḍā
apramāṇakūḍalasaṅgamadēvā.