•  
  •  
  •  
  •  
Index   ವಚನ - 715    Search  
 
ಈಶಾನಮುಖದಲ್ಲಿ ಈಶಾನಮಂತ್ರವಡಗಿತ್ತು. ತತ್ಪುರಷಮುಖದಲ್ಲಿ ತತ್ಪುರುಷಮಂತ್ರವಡಗಿತ್ತು. ಅಘೋರಮುಖದಲ್ಲಿ ಅಘೋರಮಂತ್ರವಡಗಿತ್ತು. ವಾಮದೇವಮುಖದಲ್ಲಿ ವಾಮದೇವಮಂತ್ರವಡಗಿತ್ತು. ಸದ್ಯೋಜಾತಮುಖದಲ್ಲಿ ಸದ್ಯೋಜಾತಮಂತ್ರವಡಗಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Īśānamukhadalli īśānamantravaḍagittu. Tatpuraṣamukhadalli tatpuruṣamantravaḍagittu. Aghōramukhadalli aghōramantravaḍagittu. Vāmadēvamukhadalli vāmadēvamantravaḍagittu. Sadyōjātamukhadalli sadyōjātamantravaḍagittu nōḍā apramāṇakūḍalasaṅgamadēvā.