ಇನ್ನು ಷಡಂಗನಿವೈತ್ತಿ ಅದೆಂತೆಂದಡೆ:
ಶಿವ ಸದಾಶಿವ ಈಶ್ವರ ರುದ್ರ ವಿಷ್ಣು ಬ್ರಹ್ಮ
ಈ ಆರು ಶಿವಾಂಗವು ಚಿಚ್ಛಕ್ತಿಯಲ್ಲಿ ಅಡಗಿತ್ತು ನೋಡಾ.
ಇದಕ್ಕೆ ನಿಃಕಲಾತೀತಾಗಮೇ:
ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ |
ಶಿವಂ ಶಿವಾಂಗಮಿತ್ಯೇತೇ ಚಿದ್ರೂಪೇ ಚ ವಿಲೀಯತೇ || ''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Transliteration Innu ṣaḍaṅganivaitti adentendaḍe:
Śiva sadāśiva īśvara rudra viṣṇu brahma
ī āru śivāṅgavu cicchaktiyalli aḍagittu nōḍā.
Idakke niḥkalātītāgamē:
Brahmā viṣṇuśca rudraśca īśvaraśca sadāśivaḥ |
śivaṁ śivāṅgamityētē cidrūpē ca vilīyatē ||''
intendudāgi,
apramāṇakūḍalasaṅgamadēvā.