•  
  •  
  •  
  •  
Index   ವಚನ - 768    Search  
 
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧವಿಡಿದಾತ ಗುರುವಲ್ಲ. ಆತ ದೋಷಾರ್ಥಿ; ಆತ ನರಕಿ ಎಂದುದು ನೋಡಾ. ಇದಕ್ಕೆ ವೀರಾಗಮೇ: ಕಾಂಚನಂ ಕಾಮಿನೀಚೈವ ತಥಾ ಮಹಿಶ್ಚ ಕ್ಷೇತ್ರಕಂ | ಗುರುಣಾ ತ್ರಿವಿಧಂ ಭೋಗ್ಯಂ ತದ್ಗುರುಃ ನರಕಂ ವ್ರಜೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Transliteration Honnu heṇṇu maṇṇemba trividhaviḍidāta guruvalla. Āta dōṣārthi; āta naraki endudu nōḍā. Idakke vīrāgamē: Kān̄canaṁ kāminīcaiva tathā mahiśca kṣētrakaṁ | guruṇā trividhaṁ bhōgyaṁ tadguruḥ narakaṁ vrajēt ||'' intendudāgi, apramāṇakūḍalasaṅgamadēvā.