•  
  •  
  •  
  •  
Index   ವಚನ - 776    Search  
 
ಹೊನ್ನ ಬಿಟ್ಟರೇನು? ಹೆಣ್ಣಿನಾಸೆಯ ಬಿಡದನ್ನಕ್ಕ. ಅಲ್ಲಿಗೆ ಹಿರಿಯತನ ಸಲ್ಲದು. ಹೆಣ್ಣ ಬಿಟ್ಟರೇನು? ಮಣ್ಣಿನಾಸೆಯ ಬಿಡದನ್ನಕ್ಕ. ಅಲ್ಲಿಗೆ ಹಿರಿಯತನ ಸಲ್ಲದು. ಅದೆಂತೆಂದಡೆ: ಈ ತ್ರಿವಿಧವು ಒಂದಬಿಟ್ಟೊಂದಿರದಾಗಿ, ಈ ತ್ರಿವಿಧವನತಿಗಳೆದು ಮನ ಮಹಾಘನದಲ್ಲಿ ಲೀಯವಾಗಿ ದಗ್ಧಪಟನ್ಯಾಯದಲ್ಲಿ ಸುಳಿವ ನಿಜಸುಳಿವಿಂಗೆ ನಮೋ ನಮೋ ಎನುತಿರ್ದೆನು ನೋಡಾ. ಅಪ್ರಮಾಣಕೂಡಲಸಂಗಮದೇವಾ.
Transliteration Honna biṭṭarēnu? Heṇṇināseya biḍadannakka. Allige hiriyatana salladu. Heṇṇa biṭṭarēnu? Maṇṇināseya biḍadannakka. Allige hiriyatana salladu. Adentendaḍe: Ī trividhavu ondabiṭṭondiradāgi, ī trividhavanatigaḷedu mana mahāghanadalli līyavāgi dagdhapaṭan'yāyadalli suḷiva nijasuḷiviṅge namō namō enutirdenu nōḍā. Apramāṇakūḍalasaṅgamadēvā.