ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳಲ್ಲಿ
ಬಿದ್ದು ಹೊರಳಾಡುತ್ತಿಹರು,
ಗುರುವೆಂಬ ನುಡಿಗೆ ನಾಚರು.
ಪರಧನ ಪರಸ್ತ್ರೀಗಳುಪ್ಪುತ್ತಿಹರು,
ಗುರುವೆಂಬ ನುಡಿಗೆ ನಾಚರು.
ಜಾಗ್ರ ಸ್ವಪ್ನ ಸುಷುಪ್ತಿಯ ಕೆಡಿಸಿ
ತೂರ್ಯ ತೂರ್ಯಾತೀತವ ಬೆರಸಲರಿಯರು,
ಗುರುವೆಂಬ ನುಡಿಗೆ ನಾಚರು.
ಆ ತೂರ್ಯಾತೀತಕತ್ತತ್ತ ವ್ಯೋಮಾತೀತವಾಗಿಹ
ಮಹಾಘನದಲ್ಲಿ ಬೆರಸಿ ಬೇರಾಗಲರಿಯದೆ
ಗುರುಲಿಂಗಜಂಗಮವೆಂದು ಸುಳಿವ
ಪಂಚಮಹಾಪಾತಕರ ನೋಡಿ
ನಾಚಿತ್ತು ನಾಚಿತ್ತು ನೋಡಾ ಎನ್ನ ಮನ
ಅಪ್ರಮಾಣಕೂಡಲಸಂಗಮದೇವಾ.
Transliteration Āṇava māyā kārmikavemba malatrayaṅgaḷalli
biddu horaḷāḍuttiharu,
guruvemba nuḍige nācaru.
Paradhana parastrīgaḷupputtiharu,
guruvemba nuḍige nācaru.
Jāgra svapna suṣuptiya keḍisi
tūrya tūryātītava berasalariyaru,
Guruvemba nuḍige nācaru.
Ā tūryātītakattatta vyōmātītavāgiha
mahāghanadalli berasi bērāgalariyade
guruliṅgajaṅgamavendu suḷiva
pan̄camahāpātakara nōḍi
nācittu nācittu nōḍā enna mana
apramāṇakūḍalasaṅgamadēvā.