•  
  •  
  •  
  •  
Index   ವಚನ - 803    Search  
 
ವಾಗಾದಿಗಳೈದು, ವಚನಾದಿಗಳೈದು, ಶ್ರೋತ್ರಾದಿಗಳೈದು, ಶಬ್ದಾದಿಗಳೈದು, ಕರಣ ನಾಲ್ಕು, ಕರಣಂಗಳ ಮೇಲೆ ಪುರುಷನೊಬ್ಬನು, ಆ ಪುರುಷಗತ್ತತ್ತ ಪರಮ, ಆ ಪರಕತ್ತತ್ತ ವ್ಯೋಮ. ಆ ವೋಮಕತ್ತತ್ತ ವ್ಯೋಮಾತೀತ. ಆ ವ್ಯೋಮಾತೀತವ ಶಿವನೆಂದು ಸಕಲ ವೇದಾಗಮಶಾಸ್ತ್ರಂಗಳು ಸಾರುತ್ತಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ
Transliteration Vāgādigaḷaidu, vacanādigaḷaidu, śrōtrādigaḷaidu, śabdādigaḷaidu, karaṇa nālku, karaṇaṅgaḷa mēle puruṣanobbanu, ā puruṣagattatta parama, ā parakattatta vyōma. Ā vōmakattatta vyōmātīta. Ā vyōmātītava śivanendu sakala vēdāgamaśāstraṅgaḷu sāruttihudu nōḍā apramāṇakūḍalasaṅgamadēvā