ಗುರುಕರುಣವಿಲ್ಲದೆ
ವೇದಾಗಮಶಾಸ್ತ್ರಪುರಾಣಂಗಳನೋದಿ ಕಾಣದೆ ಹೋದರು.
ಅದು ಕಾರಣವೆ,-
ವೇದವಿಪ್ರರ ಬೋಧೆ, ಶಾಸ್ತ್ರ ಸಂತೆಯ ಸುದ್ಧಿ,
ಪುರಾಣ ಪುಂಡರಗೋಷ್ಠಿ ಎಂಬ ಶರಣರ ವಾಕ್ಯ ದಿಟ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Gurukaruṇavillade
vēdāgamaśāstrapurāṇaṅgaḷanōdi kāṇade hōdaru.
Adu kāraṇave,-
vēdaviprara bōdhe, śāstra santeya sud'dhi,
purāṇa puṇḍaragōṣṭhi emba śaraṇara vākya diṭa nōḍā
apramāṇakūḍalasaṅgamadēvā.