ನಿರಾಮಯಾತೀತದಲ್ಲಿ ಹುಟ್ಟಿದ ನೋಡಾ ಶರಣನು.
ನಿರಾಮಯಾತೀತದಲ್ಲಿ ಬೆಳೆದನು ನೋಡಾ ಶರಣನು.
ನಿರಾಮಯಾತೀತದಲ್ಲಿ ಲೀಯವಾದ ನೋಡಾ ಶರಣನು.
ನಿರಾಮಯಾತೀತದಲ್ಲಿ ಲೀಯವಾದ ಶರಣನ ಜನನವು
ನಿರಾಮಯಾತೀತವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Nirāmayātītadalli huṭṭida nōḍā śaraṇanu.
Nirāmayātītadalli beḷedanu nōḍā śaraṇanu.
Nirāmayātītadalli līyavāda nōḍā śaraṇanu.
Nirāmayātītadalli līyavāda śaraṇana jananavu
nirāmayātītavāgihudu nōḍā
apramāṇakūḍalasaṅgamadēvā.