ಕುರುಹು ಕೆಟ್ಟು ಬೀಜದಲ್ಲಿ ಮೂರು ನಿರಾಳವೃಕ್ಷ ಹುಟ್ಟಿತ್ತು.
ಒಂದು ವೃಕ್ಷ ಹನ್ನೆರಡು ಕೊಂಬಾದವು.
ಒಂದು ವೃಕ್ಷ ಹದಿನಾರು ಕೊಂಬಾದವು.
ಒಂದು ವೃಕ್ಷ ಎಂಟು ಕೊಂಬಾದವು.
ಸದ್ವಾಸನೆಯೆಂಬ ಹೂವಾಯಿತ್ತು.
ಸಚ್ಚಿದಾನಂದವೆಂಬ ಕಾಯಾಯಿತ್ತು.
ನಿಶ್ಶಬ್ದವೆಂಬ ಹಣ್ಣಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Kuruhu keṭṭu bījadalli mūru nirāḷavr̥kṣa huṭṭittu.
Ondu vr̥kṣa hanneraḍu kombādavu.
Ondu vr̥kṣa hadināru kombādavu.
Ondu vr̥kṣa eṇṭu kombādavu.
Sadvāsaneyemba hūvāyittu.
Saccidānandavemba kāyāyittu.
Niśśabdavemba haṇṇāyittu nōḍā
apramāṇakūḍalasaṅgamadēvā.