•  
  •  
  •  
  •  
Index   ವಚನ - 876    Search  
 
ಆ ತೀರ್ಥ ಸೂರ್ಯಪ್ರಭೆಗೂ ಬತ್ತಲೀಯದು, ಜ್ವಾಲಾಗ್ನಿ ಉಷ್ಣಕೂ ಬತ್ತಲೀಯದು, ಗಾಳಿ ಬೀಸಿದಡೆ ಅಲ್ಲಾಡದು, ತೆರೆನೊರೆಗಳಿಲ್ಲ, ಹುಳುಗಳಿಲ್ಲ, ಆಕಾಶದಲ್ಲಿದ್ದು ಬಾಹ ಮಳೆಯಿಲ್ಲ; ಪೃಥ್ವಿ ಅಪ್ಪು ತೇಜ ವಾಯು ಆಕಾಶ ಲಯವಾದಡೂ ಲಯವಿಲ್ಲ ಆ ತೀರ್ಥಕ್ಕೆ. ಅಂಥ ಚಿತ್ಪ್ರಕಾಶತೀರ್ಥವ ಮಹಾಶರಣ ಬಲ್ಲನಲ್ಲದೆ ಮಿಕ್ಕ ಭವಭಾರಿಗಳೆತ್ತ ಬಲ್ಲರು ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Ā tīrtha sūryaprabhegū battalīyadu, jvālāgni uṣṇakū battalīyadu, gāḷi bīsidaḍe allāḍadu, terenoregaḷilla, huḷugaḷilla, ākāśadalliddu bāha maḷeyilla; pr̥thvi appu tēja vāyu ākāśa layavādaḍū layavilla ā tīrthakke. Antha citprakāśatīrthava mahāśaraṇa ballanallade mikka bhavabhārigaḷetta ballaru nōḍā apramāṇakūḍalasaṅgamadēvā.