ತಾನೆ ಶಿವಪ್ರಣವ, ತಾನೆ ಶಕ್ತಿಪ್ರಣವ,
ತಾನೆ ಶಿವಶಕ್ತಿರಹಿತವಾಗಿಹ ಮಹಾಪ್ರಣವ ನೋಡಾ.
ತಾನೆ ಆದಿಪ್ರಣವ, ತಾನೆ ಅನಾದಿಪ್ರಣವ,
ತಾನೆ ಕಲಾಪ್ರಣವ ನೋಡಾ.
ತಾನೆ ಅವಾಚ್ಯಪ್ರಣವ, ತಾನೆ ನಿರಂಜನಪ್ರಣವ,
ತಾನೆ ನಿರಾಮಯಪ್ರಣವ ನೋಡಾ,
ತನ್ನಿಂದಧಿಕವಾದ ಪ್ರಣವವೊಂದಿಲ್ಲವಾಗಿ
ತಾನೇ ನಿರಂಜನಾತೀತಪ್ರಣವ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Tāne śivapraṇava, tāne śaktipraṇava,
tāne śivaśaktirahitavāgiha mahāpraṇava nōḍā.
Tāne ādipraṇava, tāne anādipraṇava,
tāne kalāpraṇava nōḍā.
Tāne avācyapraṇava, tāne niran̄janapraṇava,
tāne nirāmayapraṇava nōḍā,
tannindadhikavāda praṇavavondillavāgi
tānē niran̄janātītapraṇava nōḍā
apramāṇakūḍalasaṅgamadēvā.