ಅಜಾತನೆಂದೆನಬೇಡ, ಜಾತನೆಂದೆನಬೇಡ.
ಹದಿನೆಂಟುಜಾತವಾದರಾವುದು ?
ಒಂದೇ ಗುರುವಿನ ವೇಷವಿದ್ದವರಿಗೆ
ದಾಸೋಹವ ಮಾಡುವುದೆ ಶಿವಾಚಾರ.
ಅದಲ್ಲದೆ ಗುರುಕೊಟ್ಟ ಮುರುಹು ಮುದ್ರೆ ಲಾಂಛನವ ಹೊತ್ತು
ಮರಳಿ ವೇಷವಳಿದು ಬಂದವರಿಗೆದಾಸೋಹವ ಮಾಡುವದು,
ಶಿವಾಚಾರಕ್ಕೆ ಹೇಸಿಕೆ ಕಾಣಾ ಕಲಿದೇವರದೇವ.
Transliteration Ajātanendenabēḍa, jātanendenabēḍa.
Hadineṇṭujātavādarāvudu?
Ondē guruvina vēṣaviddavarige
dāsōhava māḍuvude śivācāra.
Adallade gurukoṭṭa muruhu mudre lān̄chanava hottu
maraḷi vēṣavaḷidu bandavarigedāsōhava māḍuvadu,
śivācārakke hēsike kāṇā kalidēvaradēva.