ಆಳುದ್ದವ ತೋಡಿ, ನೀರ ಕೊಂಡು ಬಂದು,
ಭವಿಗಳಾರೂ ಕಾಣದಂತೆ ಸ್ವಯಂ ಪಾಕವ ಮಾಡಿ,
ಇವು ತಮ್ಮ ನೇಮವ್ರತವೆಂಬರು.
ತೆಪ್ಪದಲ್ಲಿ ಸಿಕ್ಕಿದ ಜಂಬುಕನಂತೆ,
ಇದೆತ್ತಣ ನೇಮ, ಕಲಿದೇವರದೇವಾ.
Transliteration Āḷuddava tōḍi, nīra koṇḍu bandu,
bhavigaḷārū kāṇadante svayaṁ pākava māḍi,
ivu tam'ma nēmavratavembaru.
Teppadalli sikkida jambukanante,
idettaṇa nēma, kalidēvaradēvā.