•  
  •  
  •  
  •  
Index   ವಚನ - 118    Search  
 
ಕಾ[ಡಿ]ನೊ[ಳ]ಗೆ ಹೋಗಿ, ಅಭೇದ್ಯವಪ್ಪ ಲಿಂಗದ ಭೇದವನರಿಯದೆ ಹೋದಿರಲ್ಲಾ.ಮಿಣುಕಿನ ಪ್ರಭೆಯಂತೆ, ಧಣಧಣಿಸುವ ಘನದನುವನರಿಯದೆ ಹೋದಿರಲ್ಲಾ. ಪಂಚತತ್ವವನೊಳಕೊಂಡ ಪರಬ್ರಹ್ಮವು ಪಂಚತತ್ವದಲ್ಲಿ ವಂಚಿಸಿದರೆ, ಸಂಚಲಗೊಂಬ ಸಂದೇಹವ ನೋಡಾ. ಇದು ಕಾರಣ, ಸರ್ವಸಂಚಲವನತಿಗಳೆದು, ಸದಾಕಾಲದಲ್ಲಿ ಲಿಂಗವ ಪೂಜಿಸುವ ಪೂಜಾವಿಧಾನರ ತೋರಾ ಕಲಿದೇವರದೇವ.
Transliteration Kā[ḍi]no[ḷa]ge hōgi, abhēdyavappa liṅgada bhēdavanariyade hōdirallā.Miṇukina prabheyante, dhaṇadhaṇisuva ghanadanuvanariyade hōdirallā. Pan̄catatvavanoḷakoṇḍa parabrahmavu pan̄catatvadalli van̄cisidare, san̄calagomba sandēhava nōḍā. Idu kāraṇa, sarvasan̄calavanatigaḷedu, sadākāladalli liṅgava pūjisuva pūjāvidhānara tōrā kalidēvaradēva.