ಕಾಳಿಕಾದೇವಿ ಚಾಮುಂಡಿ ಗೌರಿ ಬನದಶಂಕರಿ.
ಇಂತೀ ನಾಲ್ಕು ಶಕ್ತಿಯರು ಮೊದಲಾದ ಹಲವು
ಶಕ್ತಿದೈವಂಗಳನಾರಾಧಿಸಿ,
ಅವರೆಂಜಲ ಭುಂಜಿಸುವವರಿಗೆ ಗುರುವಿಲ್ಲ, ಗುರುಪ್ರಸಾದವಿಲ್ಲ.
ಲಿಂಗವಿಲ್ಲ, ಲಿಂಗಪ್ರಸಾದವಿಲ್ಲ. ಜಂಗಮವಿಲ್ಲ, ಜಂಗಮಪ್ರಸಾದವಿಲ್ಲ.
ಇಂತಪ್ಪ ಪಾತಕರಿಗೆ ಸೂರ್ಯಚಂದ್ರರುಳ್ಳನಕ್ಕ
ಇಪ್ಪತ್ತೆಂಟುಕೋಟಿ ನಾಯಕನರಕ ತಪ್ಪದು.
ಆ ನರಕ ತೀರಿದ ಬಳಿಕ,
ಶ್ವಾನ ಸೂಕರ ಯೋನಿಯಲ್ಲಿ ಬಪ್ಪುದು ತಪ್ಪುದು.
ಆ ಜನ್ಮ ತೀರಿದ ಬಳಿಕ, ರುದ್ರಪ್ರಳಯ ಪರಿಯಂತರ
ನರಕ ತಪ್ಪದೆಂದ, ಕಲಿದೇವಯ್ಯ.
Transliteration Kāḷikādēvi cāmuṇḍi gauri banadaśaṅkari.
Intī nālku śaktiyaru modalāda halavu
śaktidaivaṅgaḷanārādhisi,
avaren̄jala bhun̄jisuvavarige guruvilla, guruprasādavilla.
Liṅgavilla, liṅgaprasādavilla. Jaṅgamavilla, jaṅgamaprasādavilla.
Intappa pātakarige sūryacandraruḷḷanakka
ippatteṇṭukōṭi nāyakanaraka tappadu.
Ā naraka tīrida baḷika,
śvāna sūkara yōniyalli bappudu tappudu.
Ā janma tīrida baḷika, rudrapraḷaya pariyantara
naraka tappadenda, kalidēvayya.