•  
  •  
  •  
  •  
Index   ವಚನ - 141    Search  
 
ಗೀತ ಪಾತ್ರ ಬೈರೂಪ ಸೂಳೆ ಡೊಂಬಿತಿ ತಾಳದಂಡಿಗಿ ಸೂತ (?) ವೈಶಿಕದ ಆಳಾಪಕ್ಕೆ ಮರುಳಾಗಿ ತಲೆದೂಗುತಿರ್ಪರು, ಸರ್ಪನು ಸ್ವರವನು ತಾ ಕೇಳಿದಂತೆ. ಗೋಕ್ಷತ್ರಿಯಧಿಪ ಕಾಕ ಪುರಾಣ (?) ಪರಧನ ಪರಸತಿ ಗೌತಮ ದುರ್ಯೋಧನ ಕೀಚಕ ರಾವಳ ಮೊದಲಾಗಿ ಸತ್ತುಹೋದವರ ಸಂಗತಿಯ ಕೇಳಿದಡೆ, ಕೆಟ್ಟ ಮೈ ಸುವರ್ಣವಾಯಿತೆಂಬ ಭ್ರಷ್ಟನಾಯಿನುಡಿಯ ಕೇಳಿ ಕೃತಾರ್ಥರಾದೆವೆಂಬ ಮತಿಗೇಡಿ ನಾಯಿಗಳಿಗೆ ಶಿವಗತಿ, ಧರ್ಮಮಾರ್ಗ ಹೇಳಿದವರಿಗೆ ಸತ್ತ ಹೆಣದ ಮುಂದೆ ಪಂಚಮಹಾವಾದ್ಯವ ಬಾರಿಸಿದ ತೆರನಂತಾಯಿತ್ತು,ಕಲಿದೇವರದೇವಯ್ಯಾ.
Transliteration Gīta pātra bairūpa sūḷe ḍombiti tāḷadaṇḍigi sūta (?) Vaiśikada āḷāpakke maruḷāgi taledūgutirparu, sarpanu svaravanu tā kēḷidante. Gōkṣatriyadhipa kāka purāṇa (?) Paradhana parasati gautama duryōdhana kīcaka rāvaḷa modalāgi sattuhōdavara saṅgatiya kēḷidaḍe, keṭṭa mai suvarṇavāyitemba bhraṣṭanāyinuḍiya kēḷi kr̥tārtharādevemba matigēḍi nāyigaḷige śivagati, dharmamārga hēḷidavarige satta heṇada munde pan̄camahāvādyava bārisida teranantāyittu,kalidēvaradēvayyā.