ಪೃಥ್ವಿಯ ಮೇಲಣ ಶಿಲೆಯ ತಂದು, ಪ್ರತಿಮೆಗಳ ಮಾಡಿ,
ಕಲ್ಲುಕುಟಿಗನಲ್ಲಿಯೆ ಗುರುವಾದ, ಕಲ್ಲು ಶಿಷ್ಯನಾದ.
ಹಿಂದಣಾದಿಯನರಿಯದ ಗುರು, ಮುಂದೆ ವೇದಿಸಲಿಲ್ಲದ,
ಉಪದೇಶಕೊಳ್ಳಲರಿಯದ ಶಿಷ್ಯ,
ಈ ಎರಡೂ ಕಲ್ಲಕುಟಿಗನ ಕಲ್ಲಿನಂತೆ ಕಾಣಾ, ಕಲಿದೇವಯ್ಯ.
Transliteration Pr̥thviya mēlaṇa śileya tandu, pratimegaḷa māḍi,
kallukuṭiganalliye guruvāda, kallu śiṣyanāda.
Hindaṇādiyanariyada guru, munde vēdisalillada,
upadēśakoḷḷalariyada śiṣya,
ī eraḍū kallakuṭigana kallinante kāṇā, kalidēvayya.