ಮೂರನೊಳಕೊಂಡು ಆರ ಮೀರಿ ನಿಂದ
ಘನವನೇನೆಂಬೆನಯ್ಯಾ? ನುಡಿವಡೆ ವಾಚಾತೀತ,
ನೋಡುವಡೆ ಕಂಗಳೆರಡೆಯ್ದವಯ್ಯಾ.
ಮಹದ ಬೆಳಗೆ ತಾನಾಗಿ ನಿಂದ, ಮರುಳಶಂಕರದೇವರ ನಿಲವ,
ಬಸವಣ್ಣನಿಂದ ಕಂಡು ಬದುಕಿದೆ ಕಾಣಾ,
ಕಲಿದೇವರದೇವ.
Transliteration Mūranoḷakoṇḍu āra mīri ninda
ghanavanēnembenayyā? Nuḍivaḍe vācātīta,
nōḍuvaḍe kaṅgaḷeraḍeydavayyā.
Mahada beḷage tānāgi ninda, maruḷaśaṅkaradēvara nilava,
basavaṇṇaninda kaṇḍu badukide kāṇā,
kalidēvaradēva.