ರೂಪನರ್ಪಿತವ ಮಾಡುವರು ತಮತಮಗೆ,
ರುಚಿಯನರ್ಪಿತವ ಮಾಡುವ ಭೇದವನರಿಯರು ನೋಡಾ.
ಅವರನೆಂತು ಭಕ್ತನೆಂಬೆ? ಅವರನೆಂತು ಪ್ರಸಾದಿಗಳೆಂಬೆ?
ರೂಪನು ಲಿಂಗಕ್ಕೆ ಕೊಟ್ಟು, ರುಚಿಯ ತಾವು ಭುಂಜಿಸುವ
ವ್ರತಗೇಡಿಗಳಿಗೆ ಪ್ರಸಾದವುಂಟೆ? ಕಲಿದೇವಯ್ಯ.
Transliteration Rūpanarpitava māḍuvaru tamatamage,
ruciyanarpitava māḍuva bhēdavanariyaru nōḍā.
Avaranentu bhaktanembe? Avaranentu prasādigaḷembe?
Rūpanu liṅgakke koṭṭu, ruciya tāvu bhun̄jisuva
vratagēḍigaḷige prasādavuṇṭe? Kalidēvayya.