ಸತ್ತು ಗುರುವಿನ ಕಾರುಣ್ಯವ ಕೊಂಬ ಶಿಷ್ಯಂಗೆ
ಭಕ್ತಿ ವಿಸ್ತರಿಸುವುದು, ಕರ್ತಾರ ನೆಲೆಗೊಂಬ.
ಕೊಟ್ಟುದನು ಮರೆದು ಬಳಸುವ
ಮಿಟ್ಟೆಯ ಭಂಡರನೇನೆಂಬೆ ಹೇಳಾ, ಕಲಿದೇವರದೇವಯ್ಯ.
Transliteration Sattu guruvina kāruṇyava komba śiṣyaṅge
bhakti vistarisuvudu, kartāra nelegomba.
Koṭṭudanu maredu baḷasuva
miṭṭeya bhaṇḍaranēnembe hēḷā, kalidēvaradēvayya.