ಸಾಧನೆಯ ಕಲಿತು ಆಣೆಯ ತಪ್ಪಿಸಲರಿಯದವನ
ಕೈಯಲಿ ಅಲಗಿದ್ದಡೇನಯ್ಯ?
ಮಾಡುವದಕ್ಕೆ ಕರ್ಮ ದುರಿತದ ವರ್ಮವನರಿಯದವನು
ಸಕಲಶಾಸ್ತ್ರವನೋದಿದಡೇನಯ್ಯ?
ಗಿಳಿಯೋದಿ ತನ್ನ ಅಶುದ್ಧವ
ತನ್ನ ಮೂಗಿನಲ್ಲಿ ಕಚ್ಚಿ ತೆಗೆದಂತೆ ಆಯಿತ್ತೆಂದ,
ಕಲಿದೇವರದೇವಯ್ಯ.
Transliteration Sādhaneya kalitu āṇeya tappisalariyadavana
kaiyali alagiddaḍēnayya?
Māḍuvadakke karma duritada varmavanariyadavanu
sakalaśāstravanōdidaḍēnayya?
Giḷiyōdi tanna aśud'dhava
tanna mūginalli kacci tegedante āyittenda,
kalidēvaradēvayya.