ಅರವು ತೋರಿಕೆಯೇನೂ ಇಲ್ಲದಂದು,
ಮರವು ತೋರಿಕೆಯೇನೂ ಇಲ್ಲದಂದು,
ಕುರುಹು ತೋರಿಕೆ ಏನೂ ಇಲ್ಲದಂದು
ಚಿನ್ನಾದ ಚಿದ್ಬಿಂದು ಚಿತ್ಕಳೆ ಇಲ್ಲದೆ
ಏನೋ ಏನೋ ಆಗಿರ್ದಿಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
Transliteration Aravu tōrikeyēnū illadandu,
maravu tōrikeyēnū illadandu,
kuruhu tōrike ēnū illadandu
cinnāda cidbindu citkaḷe illade
ēnō ēnō āgirdiyallā
nirupama nirāḷa mahatprabhu mahāntayōgi.