ಮೂರುಲೋಕದ ದೈತೆ ಊರೆಲ್ಲರ ಕೊಂದು ತಿಂದು,
ಬೇರೊಂದು ಠಾವಿನಲ್ಲಿ ಅಯಿದಾಳೆ.
ಠಾವನರಿತು ದೈತೆಯ ದಾತ ಮುರಿದು,
ಅನಿಹಿತವ ನೇತಿಗಳೆದು, ನಿಹಿತವು ತಾನಾದಡೆ,
ಅರ್ಕೇಶ್ವರಲಿಂಗವ ಕೂಡಿದ ಕೂಟ.
Transliteration Mūrulōkada daite ūrellara kondu tindu,
bērondu ṭhāvinalli ayidāḷe.
Ṭhāvanaritu daiteya dāta muridu,
anihitava nētigaḷedu, nihitavu tānādaḍe,
arkēśvaraliṅgava kūḍida kūṭa.