•  
  •  
  •  
  •  
Index   ವಚನ - 5    Search  
 
ತರ್ಕವ ನುಡಿವುದಕ್ಕೆ ಪರಸಮಯಿಯಲ್ಲ. ಕೃತ್ರಿಮ ನುಡಿವುದಕ್ಕೆ ಅಕೃತ್ಯನಲ್ಲ. ಮತ್ತೆ ಇವರ ನಿಂದಿಸುವುದಕ್ಕೆ ಬಂಧ ಮೋಕ್ಷದವನಲ್ಲ. ಇವ[ರ] ಅಂದಚಂದವ ಅಂತಿಂತೆಂಬುದಕ್ಕೆ ಉಭಯದ ಗೊಂದಳದವನಲ್ಲ. ಎನ್ನ ಅಂದದ ಇರವ ಕೇಳಲಿಕ್ಕೆ ನಿಮ್ಮಂಗವ ಹೇಳಿದೆನೈಸೆ. ಎನಗೆ ಎನ್ನಂಗೆ ನಿರುಪಮನ ಸಂಗ ಇನ್ನೆಂದಿಗೆ, ಎನ್ನ ಗೂಡಿನ ಒಡೆಯ ಗುಮ್ಮಟನಾಥ ಅಗಮ್ಯೇಶ್ವರಲಿಂಗ ?
Transliteration Tarkava nuḍivudakke parasamayiyalla. Kr̥trima nuḍivudakke akr̥tyanalla. Matte ivara nindisuvudakke bandha mōkṣadavanalla. Iva[ra] andacandava antintembudakke ubhayada gondaḷadavanalla. Enna andada irava kēḷalikke nim'maṅgava hēḷidenaise. Enage ennaṅge nirupamana saṅga innendige, enna gūḍina oḍeya gum'maṭanātha agamyēśvaraliṅga?