•  
  •  
  •  
  •  
Index   ವಚನ - 60    Search  
 
ಅಂಬುಧಿಯಲ್ಲಿ ಅಂಬಿಗ ಮನೆಯ ಮಾಡಿ, ಕುಂಭಿನಿಯಲ್ಲಿ ಇರಲೊಲ್ಲದೆ, ಹರುಗೋಲ ಬೆಂಬಳಿಯಲ್ಲಿ ಬದುಕಿಹೆನೆಂದು [ಹೋದಡೆ] ಹರುಗೋಲು ತುಂಬಿ, ಮಂದಿ ಸಂದಣಿಸಿತ್ತು. ಕಣಿಯ ಹಿಡಿದು ಒತ್ತುವುದಕ್ಕೆ ಠಾವಿಲ್ಲದೆ, ಅಂಬಿಗ ಹಿಂಗಿದ. ಹೆರೆಸಾರಿ ಹರುಗೋಲು ಅಂಬುಧಿಯಲ್ಲಿ ಮುಳುಗಿತ್ತು, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿಯದೆ.
Transliteration Ambudhiyalli ambiga maneya māḍi, kumbhiniyalli iralollade, harugōla bembaḷiyalli badukihenendu [hōdaḍe] harugōlu tumbi, mandi sandaṇisittu. Kaṇiya hiḍidu ottuvudakke ṭhāvillade, ambiga hiṅgida. Heresāri harugōlu ambudhiyalli muḷugittu, guḍiyoḍeya gum'maṭanāthana agamyēśvaraliṅgavanariyade.