•  
  •  
  •  
  •  
Index   ವಚನ - 10    Search  
 
ಅರಿದು ಕಂಡೆಹೆನೆಂಬನ್ನಬರ, ಅರಿವಿಂಗೆ ಮುನ್ನವೆ ಪರಿಪೂರ್ಣವಸ್ತು, ಬೇರೊಂದ ಕುರುಹಿನಿಂದ ಅರಿದೆಹೆನೆಂದಡೆ, ಆ ಅರಿವಿನಿಂದ ಕುರುಹಿನ ಕುಲ ಹರಿಯಬೇಕು. ಉತ್ತರ ಪೂರ್ವವೆಂಬ ಉಭಯದ ರಕ್ಷೆಯ ಸೂತಕ ಹರಿದು, ನಿಶ್ಚಯವಾದ ಪರಿಪೂರ್ಣಂಗೆ ಹೆಚ್ಚು ಕುಂದೆಂಬುದಿಲ್ಲ, ಕಾಮಧೂಮ ಧೂಳೇಶ್ವರಾ.
Transliteration Aridu kaṇḍ'̔ehenembannabara, ariviṅge munnave paripūrṇavastu, bēronda kuruhininda aridehenendaḍe, ā arivininda kuruhina kula hariyabēku. Uttara pūrvavemba ubhayada rakṣeya sūtaka haridu, niścayavāda paripūrṇaṅge heccu kundembudilla, kāmadhūma dhūḷēśvarā.