ಅರಿದು ಮರೆದು ಎಚ್ಚತ್ತೆನೆಂಬಲ್ಲಿ ಅರಿವುಂಟೆ ?
ತೊಳಗಿ ಬೆಳಗಿ ಪ್ರಜ್ವಲಿಸಿ ಉರಿವ ಬೆಳಗು ಕೆಡುವಲ್ಲಿ,
ಉಡುಗುತ್ತಿದ್ದೇನೆ ಎಂದು ನುಡಿಯಿತ್ತೆ ?
ಇಂತಿವ ಹಿಡಿವಲ್ಲಿ, ಬಿಡುವಲ್ಲಿ, ಮಿಕ್ಕಾದವ ಒಡಗೂಡುವಲ್ಲಿ,
ಅಡಿಯೇರಿದ ಮತ್ತೆ ಪುನರಪಿ ಅಡಿ ಉಂಟೆ ?
ತೊಟ್ಟು ಬಿಟ್ಟ ಹಣ್ಣಿಂಗೆ ಮತ್ತಾ ಬುಡದಾಸೆಯೇಕೆ?
ನಿಶ್ಚಯವೆಂಬುದು ನಷ್ಟವಾದಲ್ಲಿ,
ಕಾಮಧೂಮ ಧೂಳೇಶ್ವರನೆಂಬ ಲಕ್ಷವೇತಕ್ಕೆ ?
Transliteration Aridu maredu eccattenemballi arivuṇṭe?
Toḷagi beḷagi prajvalisi uriva beḷagu keḍuvalli,
uḍuguttiddēne endu nuḍiyitte?
Intiva hiḍivalli, biḍuvalli, mikkādava oḍagūḍuvalli,
aḍiyērida matte punarapi aḍi uṇṭe?
Toṭṭu biṭṭa haṇṇiṅge mattā buḍadāseyēke?
Niścayavembudu naṣṭavādalli,
kāmadhūma dhūḷēśvaranemba lakṣavētakke?