ದರ್ಪಣವ ನೋಡುವ ದೃಷ್ಠಿ ನಷ್ಟವಾದ ಮತ್ತೆ,
ಆ ದರ್ಪಣದ ಲಕ್ಷಿಸಲಿಲ್ಲ.
ಅರಸುವ ಅರಕೆಯರತು, ಆ ಅರಕೆ ಕರಿಗೊಂಡ ಮತ್ತೆ,
ಆ ಬಯಕೆ ನಿಂದಿತ್ತು. ಆ ಬಯಕೆಯ ಭ್ರಮೆ ನಿಂದಲ್ಲಿ,
ಕಾಮಧೂಮ ಧೂಳೇಶ್ವರನೆಂಬುದಕ್ಕೆ ಇದಿರಡೆಯಿಲ್ಲ.
Transliteration Darpaṇava nōḍuva dr̥ṣṭhi naṣṭavāda matte,
ā darpaṇada lakṣisalilla.
Arasuva arakeyaratu, ā arake karigoṇḍa matte,
ā bayake nindittu. Ā bayakeya bhrame nindalli,
kāmadhūma dhūḷēśvaranembudakke idiraḍeyilla.