ವಿದ್ಯೆ ಅವಿದ್ಯೆಯಾದಲ್ಲಿ,
ಆ ಅರಿವ ಹೊದ್ದುವ ಬಂಧವಾವುದು ?
ಕ್ಷುದ್ರ ಇಂದ್ರಿಯಂಗಳೆಂಬ ಸಂದುಸಂಶಯವಾವುದು ?
ಅದು ಒಡೆದ ಕುಂಭದ ನೀರಿನ ನೆಳಲಿನಂತೆ,
ಅದು ಕುಂಭವ ಹಿಂಗಲಿಕೆ, ಆ ಬಿಂಬ ಅಲ್ಲಿಯೆ ಅಡಗಿತ್ತು,
ಮತ್ತೆ ಕುಂಭವ ನೋಡಲಿಕ್ಕೆ ಒಂದೂ ಇಲ್ಲ.
ಆ ಅಂಗ ಲಕ್ಷದ ಕುಂಭದಲ್ಲಿ, ಇಂಗಿಹೋದ ಆತ್ಮಂಗೆ
ಬಂಧಮೋಕ್ಷಕರ್ಮಂಗಳು, ಒಂದೂ ಇಲ್ಲ,
ಕಾಮಧೂಮ ಧೂಳೇಶ್ವರನೆಂಬ ಭಾವಸಂದೇಹ ನಂದಿತ್ತಾಗಿ.
Transliteration Vidye avidyeyādalli,
ā ariva hodduva bandhavāvudu?
Kṣudra indriyaṅgaḷemba sandusanśayavāvudu?
Adu oḍeda kumbhada nīrina neḷalinante,
adu kumbhava hiṅgalike, ā bimba alliye aḍagittu,
matte kumbhava nōḍalikke ondū illa.
Ā aṅga lakṣada kumbhadalli, iṅgihōda ātmaṅge
bandhamōkṣakarmaṅgaḷu, ondū illa,
kāmadhūma dhūḷēśvaranemba bhāvasandēha nandittāgi.