ಅಂಡ ಪಿಂಡವಾಗಿ, ಪಿಂಡಾಂಡವನೊಳಕೊಂಡು
ವಿಚ್ಚಿನ್ನವಾದ ಭೇದವ ತಿಳಿದು,
ತ್ರಿಗುಣಭೇದದಲ್ಲಿ ಪಂಚಭೂತಿಕದಲ್ಲಿ ಪಂಚವಿಂಶತಿತತ್ವಂಗಳಲ್ಲಿ,
ಏಕೋತ್ತರಶತಸ್ಥಲ ಮುಂತಾದ ಭೇದಂಗಳ ತಿಳಿದು,
ಆವಾವ ಸ್ಥಲಕ್ಕೂ ಸ್ಥಲನಿರ್ವಾಹವ ಕಂಡು,
ಬಹುಜನಂಗಳು ಒಂದೆ ಗ್ರಾಮದ ಬಾಗಿಲಲ್ಲಿ ಬಂದು
ತಮ್ಮ ತಮ್ಮ ನಿಳಯಕ್ಕೆ ಸಂದು
ಗ್ರಾಮದ ಸುಖ-ದುಃಖವ ಅನುಭವಿಸುವಂತೆ,
ಇಂತೀ ಪಿಂಡಸ್ಥಲವನ್ನಾಚರಿಸಿ
ಆತ್ಮ ವೃಥಾ ಹೋಹುದಕ್ಕೆ ಮೊದಲೆ
ಸದ್ಯೋಜಾತಲಿಂಗವ ಕೂಡಬೇಕು.
Transliteration Aṇḍa piṇḍavāgi, piṇḍāṇḍavanoḷakoṇḍu
viccinnavāda bhēdava tiḷidu,
triguṇabhēdadalli pan̄cabhūtikadalli pan̄cavinśatitatvaṅgaḷalli,
ēkōttaraśatasthala muntāda bhēdaṅgaḷa tiḷidu,
āvāva sthalakkū sthalanirvāhava kaṇḍu,
bahujanaṅgaḷu onde grāmada bāgilalli bandu
tam'ma tam'ma niḷayakke sandu
grāmada sukha-duḥkhava anubhavisuvante,
intī piṇḍasthalavannācarisi
ātma vr̥thā hōhudakke modale
sadyōjātaliṅgava kūḍabēku.