•  
  •  
  •  
  •  
Index   ವಚನ - 7    Search  
 
ಸದ್ಗುರುವಪ್ಪ ಅಂಡದಲ್ಲಿ ಸದಾತ್ಮವಪ್ಪ ಶಿಷ್ಯ ಪಿಂಡಿತವಾಗಿ, ಆ ಪಿಂಡಕ್ಕೆ ದಿವ್ಯತೇಜೋಪ್ರಕಾಶವಪ್ಪ ಆತ್ಮ ಪುಟ್ಟಲಿಕ್ಕಾಗಿ, ಗುರುವಿನ ಕರಂಡವಳಿದು ಆ ಶಿಷ್ಯನ ಪಿಂಡವಳಿದು, ಮರದಲ್ಲಿ ಉರಿಹುಟ್ಟಿ ಮರನೆಂಬುದು ಕೆಟ್ಟು ಕೆಂಡವಾದಂತೆ, ಕೆಂಡದ ಬೆಂಬಳಿಯಲ್ಲಿ ನಂದದ ದೀಪವ ಕಂಡು. ಕುಂದದ ಬೆಳಗಿನಲ್ಲಿ ಕೂಡಬೇಕು ಸದ್ಯೋಜಾತಲಿಂಗವ.
Transliteration Sadguruvappa aṇḍadalli sadātmavappa śiṣya piṇḍitavāgi, ā piṇḍakke divyatējōprakāśavappa ātma puṭṭalikkāgi, guruvina karaṇḍavaḷidu ā śiṣyana piṇḍavaḷidu, maradalli urihuṭṭi maranembudu keṭṭu keṇḍavādante, keṇḍada bembaḷiyalli nandada dīpava kaṇḍu. Kundada beḷaginalli kūḍabēku sadyōjātaliṅgava.